“ಹಿಂದೂಗಳನ್ನು ಒಟ್ಟು ಮಾಡುವುದಕ್ಕಾಗಿ ಮಾತನಾಡಿದ್ದೇನೆ…”

“ಹಿಂದೂಗಳನ್ನು ಒಟ್ಟು ಮಾಡುವುದಕ್ಕಾಗಿ ಮಾತನಾಡಿದ್ದೇನೆ…”

Share
IMG-20250504-WA0001-1 "ಹಿಂದೂಗಳನ್ನು ಒಟ್ಟು ಮಾಡುವುದಕ್ಕಾಗಿ ಮಾತನಾಡಿದ್ದೇನೆ..."

ಬೆಳ್ತಂಗಡಿ : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಸತತವಾಗಿ ಹಿಂದೂಗಳ ಪರ ಮಾತನಾಡುವಂಥ ಜನಪ್ರತಿನಿಧಿಗಳ ಮೇಲೆ ಮೊಕದ್ದಮೆಯನ್ನು ಹಾಕಿಸುವ
ಚಾಳಿಯನ್ನು ಮತ್ತೆ ಮುಂದುವರಿಸಿದೆ ಎಂದು ಶಾಸಕ ಹರೀಶ್ ಪೂಂಜ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ
ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ತಾವು ಆಡಿದ ಮಾತುಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಾಸಕ ಹರೀಶ್ ಪೂಂಜ ತೆಕ್ಕಾರಿನಲ್ಲಿ ಹಿಂದೂ ಸಮಾಜವನ್ನು ಒಟ್ಟು ಮಾಡುವ ಮಾತುಗಳನ್ನು ಆಡಿದ್ದೇನೆ, ಹಿಂದೂ ಸಮಾಜ ನನ್ನ ಮಾತುಗಳನ್ನು ಸಮರ್ಥಿಸಿದೆ ನನಗೆ ಸರ್ಟಿಫಿಕೇಟ್ ಕೊಡಬೇಕಾಗಿರುವುದು ಕಾಂಗ್ರೆಸ್ ಸರಕಾರ ಅಲ್ಲ ಸರ್ಟಿಫಿಕೇಟ್ ಕೊಡಬೇಕಾಗಿರುವುದು ಹಿಂದೂ ಸಮಾಜ ಹಿಂದೂ ಸಮಾಜ ಸರ್ಟಿಫಿಕೇಟ್ ಕೊಟ್ಟಿದೆ ಎಂದು ಹೇಳಿದರು.

ಕಾಂಗ್ರೆಸ್ ಸರಕಾರವನ್ನು ಷಂಡ ಸರಕಾರವೆಂದು ಟೀಕಿಸಿದ
ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ಸರಕಾರ ಹಾಕಿದ ಕೇಸುಗಳನ್ನೆಲ್ಲ ಎದುರಿಸುತ್ತಿದ್ದೇನೆ ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಮಾತುಗಳನ್ನಾಡಿರುವುದನ್ನೂ ಕೋಮು ಪ್ರಚೋದನೆ ಎನ್ನುವಂಥದ್ದು ಕಾಂಗ್ರೆಸ್ ಸರಕಾರದ ವಾದ ಆದರೆ ನಾನು ಹಿಂದೂಗಳ ಜಾಗೃತಿಗಾಗಿ ಮಾತನಾಡಿದ್ದೇನೆ, ಹಿಂದೂ ಸಮಾಜಕ್ಕಾಗಿ ಶಾಸಕ ಸ್ಥಾನ ಕಳೆದುಕೊಳ್ಳುವುದಕ್ಕೂ ಸಿದ್ಧ ಎಂದು ಸವಾಲು ಹಾಕಿದ್ದಾರೆ.

**********************************************

IMG-20250413-WA0003-2-682x1024 "ಹಿಂದೂಗಳನ್ನು ಒಟ್ಟು ಮಾಡುವುದಕ್ಕಾಗಿ ಮಾತನಾಡಿದ್ದೇನೆ..."
IMG-20250413-WA0002-2-792x1024 "ಹಿಂದೂಗಳನ್ನು ಒಟ್ಟು ಮಾಡುವುದಕ್ಕಾಗಿ ಮಾತನಾಡಿದ್ದೇನೆ..."
IMG-20250413-WA0001-2-792x1024 "ಹಿಂದೂಗಳನ್ನು ಒಟ್ಟು ಮಾಡುವುದಕ್ಕಾಗಿ ಮಾತನಾಡಿದ್ದೇನೆ..."

Post Comment

ಟ್ರೆಂಡಿಂಗ್‌