ಪಂಜಾಬ್ ನಲ್ಲಿ ಧರ್ಮಸ್ಥಳದ ಆತ್ಮಹತ್ಯೆ ಪ್ರಕರಣ: ಪಕ್ವಾಡ ಕಾಲೇಜ್ ಪ್ರೊಫೆಸರ್ ಬಿಜಿಲ್ ಸಿ ಮ್ಯಾಥ್ಯೂ ಬಂಧನ

ಪಂಜಾಬ್ ನಲ್ಲಿ ಧರ್ಮಸ್ಥಳದ ಆತ್ಮಹತ್ಯೆ ಪ್ರಕರಣ: ಪಕ್ವಾಡ ಕಾಲೇಜ್ ಪ್ರೊಫೆಸರ್ ಬಿಜಿಲ್ ಸಿ ಮ್ಯಾಥ್ಯೂ ಬಂಧನ

Share
IMG-20250520-WA0001-1024x575 ಪಂಜಾಬ್ ನಲ್ಲಿ  ಧರ್ಮಸ್ಥಳದ ಆತ್ಮಹತ್ಯೆ ಪ್ರಕರಣ:           ಪಕ್ವಾಡ ಕಾಲೇಜ್ ಪ್ರೊಫೆಸರ್ ಬಿಜಿಲ್ ಸಿ ಮ್ಯಾಥ್ಯೂ ಬಂಧನ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿಯ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ದೆಹಲಿಯಲ್ಲಿ
ಉದ್ಯೋಗಿಯಾಗಿದ್ದ ಆಕಾಂಕ್ಷ ಎಸ್ ನಾಯರ್(22) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು ಆರೋಪಿ ಪ್ರೊಫೆಸರ್ ಕೇರಳ ಮೂಲದ ಬಿಜಿಲ್ ಸಿ ಮ್ಯಾಥ್ಯೂ ಎಂಬಾತನನ್ನು ಸೋಮವಾರ ರಾತ್ರಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಧರ್ಮಸ್ಥಳದ ಆಕಾಂಕ್ಷ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯು ಮೇ.19ರಂದು ಮಧ್ಯಾಹ್ನ ಮುಗಿದಿದ್ದು ರಾತ್ರಿ ಪೋಷಕರಿಗೆ ಸಿವಿಲ್ ಸರಕಾರಿ ಆಸ್ಪತ್ರೆಯ ಆಡಳಿತವು ಮೃತದೇಹವನ್ನು ಬಿಟ್ಟುಕೊಟ್ಟಿದೆ.
ಇದೀಗ ಆಕಾಂಕ್ಷ ದೇಹವನ್ನು ಆಂಬುಲೆನ್ಸ್ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ದೆಹಲಿ ವಿಮಾನ ನಿಲ್ದಾಣದಿಂದ ಆಕಾಂಕ್ಷ ಕೆಲಸ ಮಾಡುತ್ತಿದ್ದ ಕಂಪನಿ ಉಚಿತ ವಿಮಾನ ವ್ಯವಸ್ಥೆ ಮಾಡಿದ್ದು ಮೇ.20ನೇ ಮಂಗಳವಾರ ರಾತ್ರಿ 8 ಗಂಟೆಗೆ ಸ್ಪೈಸ್ ಏರ್ ಲೈನ್ಸ್ ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರಾತ್ರಿ 11 ಗಂಟೆಗೆ ತಲುಪಲಿದೆ ಎಂಬ ಮಾಹಿತಿ ಬಂದಿದೆ.
ಬೆಂಗಳೂರಿನಿಂದ ಧರ್ಮಸ್ಥಳ ಗ್ರಾಮದ ಬೊಳಿಯಾರ್ ಮನೆಗೆ ಆಂಬುಲೆನ್ಸ್ ಮೂಲಕ ಮೇ.21 ರಂದು ಬೆಳಗ್ಗೆ ಆಕಾಂಕ್ಷ ಮೃತದೇಹ ಬರಲಿದ್ದು ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ. ಪಂಜಾಬ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Previous post

ಮೇ 25ರಂದು ಬೆಳ್ತಂಗಡಿಯಲ್ಲಿ ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮ: ಸತ್ಯಶೋಧಕ ವೇದಿಕೆ- ಬೆಳ್ತಂಗಡಿ ಆ‌ಯೋಜನೆ

Next post

ತೆಕ್ಕಾರು ದ್ವೇಷ ಭಾಷಣ ಪ್ರಕರಣ: ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು

Post Comment

ಟ್ರೆಂಡಿಂಗ್‌

error: Content is protected !!