ಮೇ 25ರಂದು ಬೆಳ್ತಂಗಡಿಯಲ್ಲಿ ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮ: ಸತ್ಯಶೋಧಕ ವೇದಿಕೆ- ಬೆಳ್ತಂಗಡಿ ಆ‌ಯೋಜನೆ

ಮೇ 25ರಂದು ಬೆಳ್ತಂಗಡಿಯಲ್ಲಿ ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮ: ಸತ್ಯಶೋಧಕ ವೇದಿಕೆ- ಬೆಳ್ತಂಗಡಿ ಆ‌ಯೋಜನೆ

Share
20250519_192918-1024x955 ಮೇ 25ರಂದು ಬೆಳ್ತಂಗಡಿಯಲ್ಲಿ ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮ: ಸತ್ಯಶೋಧಕ ವೇದಿಕೆ- ಬೆಳ್ತಂಗಡಿ ಆ‌ಯೋಜನೆ

ಬೆಳ್ತಂಗಡಿ : ಸತ್ಯಶೋಧಕ ವೇದಿಕೆ, ಬೆಳ್ತಂಗಡಿ ಇದರ ಆಶ್ರಯದಲ್ಲಿ ಬುದ್ಧ, ಬಸವ, ಪುಲೆ ಹಾಗೂ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವು ಮೇ 25ನೇ ಭಾನುವಾರದಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸತ್ಯಶೋಧಕ ವೇದಿಕೆ
ಬೆಳ್ತಂಗಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ಸುಕೇಶ್ ಕೆ. ಮಾಲಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶಿಕ್ಷಣ ಪ್ರೋತ್ಸಾಹ್ನ ಕಾರ್ಯಕ್ರಮವನ್ನು ಅವಕಾಶ ವಂಚಿತ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
‌ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಕು.ಗೌರಿ., ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ , ಬಿ.ಜೆ.ಪಿ. ಬೆಳ್ತಂಗಡಿ ಮಂಡಲ ಪ.ಜಾ. ಮೋರ್ಚಾ ಅಧ್ಯಕ್ಷ ಈಶ್ವರ ಬೈರ ಮುಂತಾದ ಗಣ್ಯರು , ಹಲವು ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಳೆದ ಎಸ್.ಎಸ್.ಎಲ್.ಸಿ. – ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ 5ರಿಂದ 10ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ
ಎಂದು ಸಂಘಟಕರು ತಿಳಿಸಿದ್ದಾರೆ.

=========================================

IMG-20250413-WA0002-14-792x1024 ಮೇ 25ರಂದು ಬೆಳ್ತಂಗಡಿಯಲ್ಲಿ ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮ: ಸತ್ಯಶೋಧಕ ವೇದಿಕೆ- ಬೆಳ್ತಂಗಡಿ ಆ‌ಯೋಜನೆ
IMG-20250413-WA0001-15-792x1024 ಮೇ 25ರಂದು ಬೆಳ್ತಂಗಡಿಯಲ್ಲಿ ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮ: ಸತ್ಯಶೋಧಕ ವೇದಿಕೆ- ಬೆಳ್ತಂಗಡಿ ಆ‌ಯೋಜನೆ
IMG-20250413-WA0003-14-682x1024 ಮೇ 25ರಂದು ಬೆಳ್ತಂಗಡಿಯಲ್ಲಿ ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮ: ಸತ್ಯಶೋಧಕ ವೇದಿಕೆ- ಬೆಳ್ತಂಗಡಿ ಆ‌ಯೋಜನೆ

Post Comment

ಟ್ರೆಂಡಿಂಗ್‌

error: Content is protected !!