ಆಕಾಂಕ್ಷ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರಕಾರ ಪಂಜಾಬ್ ಸರಕಾರವನ್ನು ಆಗ್ರಹಿಸಲಿ : ಶಾಸಕ ಹರೀಶ್ ಪೂಂಜ

ಆಕಾಂಕ್ಷ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರಕಾರ ಪಂಜಾಬ್ ಸರಕಾರವನ್ನು ಆಗ್ರಹಿಸಲಿ : ಶಾಸಕ ಹರೀಶ್ ಪೂಂಜ

Share
IMG-20250521-WA0007-1024x579 ಆಕಾಂಕ್ಷ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರಕಾರ ಪಂಜಾಬ್ ಸರಕಾರವನ್ನು ಆಗ್ರಹಿಸಲಿ : ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಪಂಜಾಬ್ ಪಗ್ವಾಡ ಕಾಲೇಜ್ ಕ್ಯಾಂಪಸ್ ನಲ್ಲಿ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಯಬೇಕು, ಆಕಾಂಕ್ಷ ಸಾವಿಗೆ ನ್ಯಾಯ ಸಿಗಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಒತ್ತಾಯಿಸಿದ್ದಾರೆ.

ಧರ್ಮಸ್ಥಳದ ಸುರೇಂದ್ರ ನಾಯರ್ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷ ಮೃತದೇಹ ಬೊಳಿಯಾರ್ ನ ಮನೆಗೆ ತಲುಪಿದಾಗ ಮೃತರ ಅಂತಿಮ ದರ್ಶನ‌ ಪಡೆದು ಕುಟುಂಬಕ್ಕೆ ಸಾಂತ್ವನ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹರೀಶ್ ಪೂಂಜ ಆಕಾಂಕ್ಷ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಂಸದರು ಮತ್ತು ನಾವು ಸ್ಪಂದಿಸಿದ್ದೇವೆ,
ಎಫ್ ಐ ಆರ್ ಆಗಿದೆ, ಆತ್ಮಹತ್ಯೆಗೆ ಕಾರಣರಾದವನ ಬಂಧನ ಆಗಿದೆ, ಮುಂದೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರಕಾರವು ಪಂಜಾಬ್ ಸರಕಾರವನ್ನು ಆಗ್ರಹ ಮಾಡಬೇಕು ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

Previous post

ಧರ್ಮಸ್ಥಳ ಆಕಾಂಕ್ಷ ನಿಗೂಢ ಸಾವು ಪ್ರಕರಣ : ರಾಜ್ಯ ಸರ್ಕಾರ ಪಂಜಾಬ್ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕುಟುಂಬಕ್ಕೆ ನ್ಯಾಯ, ಪರಿಹಾರ ದೊರಕಿಸಿಕೊಡಬೇಕು: ಅಕ್ಬರ್ ಬೆಳ್ತಂಗಡಿ

Next post

ಬೆಳ್ತಂಗಡಿ ಅಕ್ರಮ ಮರಳು ದಂಧೆ ಹಿಂದೆ-ಮುಂದೆ!

Post Comment

ಟ್ರೆಂಡಿಂಗ್‌