ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರಿಂದ ಬಡ ರೋಗಿಗಳ ನಿರ್ಲಕ್ಷ್ಯ; ತಾಲೂಕು ವೈದ್ಯಾಧಿಕಾರಿಗೆ ಡಿವೈಎಫ್ ಐ ಮನವಿ

ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರಿಂದ ಬಡ ರೋಗಿಗಳ ನಿರ್ಲಕ್ಷ್ಯ; ತಾಲೂಕು ವೈದ್ಯಾಧಿಕಾರಿಗೆ ಡಿವೈಎಫ್ ಐ ಮನವಿ

Share
IMG-20250619-WA0000 ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರಿಂದ ಬಡ ರೋಗಿಗಳ ನಿರ್ಲಕ್ಷ್ಯ; ತಾಲೂಕು ವೈದ್ಯಾಧಿಕಾರಿಗೆ ಡಿವೈಎಫ್ ಐ ಮನವಿ

ಬೆಳ್ತಂಗಡಿ : ಇಲ್ಲಿನ ತಾಲೂಕು ಸಮುದಾಯ ಆಸ್ಪತ್ರೆಯಲ್ಲಿ ಬಡ ರೋಗಿಗಳನ್ನು ಸರಿಯಾಗಿ ಪರೀಕ್ಷೆ ನಡೆಸದೆ ಸಾಂಕೇತಿಕವಾಗಿ ಔಷಧ ನೀಡಿ ಒಬ್ಬ ಹೊರರೋಗಿಯ ಅನಾರೋಗ್ಯದಲ್ಲಿ ತೀವ್ರವಾದ ಏರುಪೇರಿಗೆ ಕಾರಣವಾದ ವೈದ್ಯರ ವಿರುದ್ಧ
ಕ್ರಮಕೈಗೊಳ್ಳುವಂತೆ ತಾಲ್ಲೂಕು ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್ ಅವರಿಗೆ ಡಿ.ವೈ.ಎಫ್.ಐ ಬೆಳ್ತಂಗಡಿ ತಾಲೂಕು ಸಮಿತಿ ಮನವಿ ನೀಡಿ ಒತ್ತಾಯಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿ ಕೂಡಲೇ ಸಭೆ ಕರೆದು ಕ್ರಮಕೈಗೊಂಡು ಮುಂದೆ ಇಂಥ ಯಾವುದೇ ರೀತಿಯ ಘಟನೆ ನಡೆಯದಂತೆ ಎಚ್ಚರವಹಿಸುವುದಾಗಿ ಭರವಸೆ ನೀಡಿದ್ದಾರೆ.
ಇಂಥ ಘಟನೆ ಮುಂದುವರಿದರೆ ಅಧಿಕಾರಿಗಳ ವಿರುದ್ಧ ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಡಿ.ವೈ.ಎಫ್.ಐ ತಾಲ್ಲೂಕು ಅಧ್ಯಕ್ಷೆ ಅದಿತಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ತಾಲೂಕು ಕಾರ್ಯದರ್ಶಿ ಅಭಿಷೇಕ್ ಪದ್ಮುಂಜ ಹಾಗೂ ಪ್ರಮುಖರಾದ ರಾಮಚಂದ್ರ ಧರ್ಮಸ್ಥಳ ಮತ್ತು ನಜೀರ್ ಕಕ್ಕಿಂಜೆ ಮತ್ತಿತರರು ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!