ಉದ್ದೇಶಪೂರ್ವಕ ಸುಳ್ಳು ವರದಿ ಆರೋಪ : ನ್ಯೂಸ್ ವೆಬ್ ಸೈಟ್ ಸಂಪಾದಕನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕೇಸು

ಉದ್ದೇಶಪೂರ್ವಕ ಸುಳ್ಳು ವರದಿ ಆರೋಪ : ನ್ಯೂಸ್ ವೆಬ್ ಸೈಟ್ ಸಂಪಾದಕನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕೇಸು

Share
IMG-20250131-WA0001-1024x562 ಉದ್ದೇಶಪೂರ್ವಕ ಸುಳ್ಳು ವರದಿ ಆರೋಪ : ನ್ಯೂಸ್  ವೆಬ್ ಸೈಟ್  ಸಂಪಾದಕನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕೇಸು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ, ವ್ಯಕ್ತಿಯೊಬ್ಬ ಮಾಹಿತಿ ನೀಡಲು ಸಿದ್ಧ ನಿರುವುದಾಗಿ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಪರವಾಗಿ ವಕೀಲರ ತಂಡ ಜಿಲ್ಲಾ ಪೊಲೀಸರ ಕಛೇರಿಗೆ ಭೇಟಿ ನೀಡಿದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿಗೆ ಲಭ್ಯವಿರದ ಬಗ್ಗೆ ಆರೋಪಿತ ಸುದರ್ಶನ ಬೆಳಾಲು ಎಂಬಾತನು ‘ಹೊಸ ಕನ್ನಡ ‘ ಎಂಬ ವೆಬ್ ನ್ಯೂಸ್ ಚಾನೆಲ್ ನಲ್ಲಿ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರಿಗೆ ಭೀತಿಯನ್ನು ಹುಟ್ಟಿಸುವಂತೆ, ಸುಳ್ಳು ಮಾಹಿತಿಯಲ್ಲಿ ವರದಿ ಮಾಡಿರುವುದು ತಿಳಿದು ಬಂದಿದೆ.

ಈ ಬಗ್ಗೆ ಆರೋಪಿತನನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿ, ವಕೀಲರ ತಂಡ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಲು ಪೂರ್ವಾನುಮತಿ ಪಡೆದಿದ್ದಾರೆಯೇ ಎಂಬ ಬಗ್ಗೆ ಹಾಗೂ ವಕೀಲರ ತಂಡ ಬಂದಾಗ ಪೊಲೀಸ್ ವರಿಷ್ಠಾಧಿಕಾರಿಗಳು ಲಭ್ಯರಿಲ್ಲದಿರಲು ಕಾರಣವೇನು ಎಂಬ ಯಾವುದೇ ಮಾಹಿತಿಗಳನ್ನು ಪರಿಶೀಲಿಸದೇ, ಯಾವುದೇ ಸೂಕ್ತ ಸಾಕ್ಷಿ/ಪುರಾವೆಗಳು ಇಲ್ಲದೇ ಸುಳ್ಳು ಮಾಹಿತಿಯನ್ನು ವರದಿ ಮಾಡಿರುವುದು ದೃಢಪಟ್ಟಿರುವ ಬಗ್ಗೆ ವೆಬ್ ಚಾನೆಲ್ ಸಂಪಾದಕನ ವಿರುದ್ಧ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 40/2025 ಕಲಂ :352, 353(1)b BNS ರಂತೆ ಪ್ರಕರಣ ದಾಖಲಿಸಲಾಗಿದೆ.

Post Comment

ಟ್ರೆಂಡಿಂಗ್‌

error: Content is protected !!