ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಅಶೋಕನಗರ ಪರಿಶಿಷ್ಟ ಜಾತಿ ಕಾಲೋನಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ

ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಅಶೋಕನಗರ ಪರಿಶಿಷ್ಟ ಜಾತಿ ಕಾಲೋನಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ

Share
IMG-20250708-WA0005-1024x487 ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಅಶೋಕನಗರ ಪರಿಶಿಷ್ಟ ಜಾತಿ ಕಾಲೋನಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ

ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿಗಳ ಅನುಷ್ಠಾನ ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮಪಂಚಾಯತ್ ವ್ಯಾಪ್ತಿಯ ಅಶೋಕನಗರ ಪರಿಶಿಷ್ಟ ಜಾತಿ ಕಾಲೋನಿಗೆ ಮಂಜೂರುಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠಾನಗೊಳಿಸುವಂತೆ ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಧರ್ಮಸ್ಥಳ ಗ್ರಾಮಪಂಚಾಯತ್ ಆಡಳಿತವು (ಕ್ರಮಾಂಕಗ್ರಾ.ಪಂ/ಧ/ 12 2025-26) ಪತ್ರದ ಮೂಲಕ ಕೋರಿದೆ.
ಧರ್ಮಸ್ಥಳ ಗ್ರಾಮಪಂಚಾಯತ್ ಆಡಳಿತವು ಶಿಫಾರಸ್ಸು ಮಾಡಿರುವಂತೆ 1)ಅಶೋಕನಗರ ಪ.ಜಾ. ಕಾಲೋನಿಗೆ 15×15 ವಿಸ್ತೀರ್ಣದ ಕಾಂಕ್ರೀಟ್ ತಡೆಗೋಡೆ ರಚನೆ: 19.00ಲಕ್ಷ, 2)ಅಶೋಕನಗರ ಪ.ಜಾತಿ ಕಾಲೋನಿಯ 20×15 ವಿಸ್ತೀರ್ಣದ ಕಾಂಕ್ರೀಟ್ ತಡೆಗೋಡೆ ರಚನೆ:18.00 ಲಕ್ಷ, 3)ಅಶೋಕನಗರ ಪ.ಜಾತಿ | ಕಾಲೋನಿಯ 25×7 ವಿಸ್ತೀರ್ಣದ ಕಾಂಕ್ರೀಟ್ ತಡೆಗೋಡೆ ರಚನೆ:50.00 ಲಕ್ಷ, 4)ಅಶೋಕನಗರ ಪ.ಜಾತಿ ಕಾಲೋನಿಯ 28×8 ವಿಸ್ತೀರ್ಣದ ಕಾಂಕ್ರೀಟ್ ತಡೆಗೋಡೆ ರಚನೆ :76.50 ಲಕ್ಷ, 5)ಅಶೋಕನಗರ ಪ.ಜಾತಿ | ಕಾಲೋನಿಗೆ 600 ಮೀ ಉದ್ಯದ ಸ್ಕ್ಯಾಬ್ ಸಹಿತ ಕಾಂಕ್ರೀಟ್ ಚರಂಡಿ ರಚನೆ: 50.00 ಲಕ್ಷ, 6)ಅಶೋಕನಗರ ಪ.ಜಾತಿ. | ಕಾಲೋನಿಯ 300 ಮೀ ಉದ್ಯದ
ಸ್ಲ್ಯಾಬ್ ಸಹಿತ ಕಾಂಕ್ರೀಟ್ ಚರಂಡಿ ರಚನೆ:27.50 ಲಕ್ಷ ಹಾಗೂ
7) ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳಿಕ್ಕಾರ ಪ.ಪಂಗಡ ಪ್ರದೇಶದ ಕಾಂಕ್ರೀಟ್ ರಸ್ತೆ ರಚನೆ:.50.00 ಲಕ್ಷ ರೂಪಾಯಿ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದೆ. ದ.ಕ. ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿಗಳು ಅನುಷ್ಠಾನಕ್ಕೆ ಬರಲಿದೆ. ಈ ಬಗ್ಗೆ ಧರ್ಮಸ್ಥಳ ಗ್ರಾ.ಪಂ. ಆಡಳಿತ ರಾಜ್ಯಸಭಾ ಸದಸ್ಯರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

Previous post

ಬೆಳ್ತಂಗಡಿ ಬಿ.ಎಂ.ಎಸ್ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ : ರಾಜಕೀಯ ಪಕ್ಷಗಳ ಪ್ರತಿಭಟನೆಗಳ ದಾಖಲೆ ಮುರಿದ ಕಾರ್ಮಿಕರು

Next post

ಬಾಕಿ ಸಾಲ ಕೇಳಿದ ವ್ಯಾಪಾರಿ ಮೇಲೆ ಕೋಪ: ಅಂಗಡಿ ಬ್ಯಾನರಿಗೆ ಬೆಂಕಿ!

Post Comment

ಟ್ರೆಂಡಿಂಗ್‌

error: Content is protected !!