ಬಾಕಿ ಸಾಲ ಕೇಳಿದ ವ್ಯಾಪಾರಿ ಮೇಲೆ ಕೋಪ: ಅಂಗಡಿ ಬ್ಯಾನರಿಗೆ ಬೆಂಕಿ!

ಬಾಕಿ ಸಾಲ ಕೇಳಿದ ವ್ಯಾಪಾರಿ ಮೇಲೆ ಕೋಪ: ಅಂಗಡಿ ಬ್ಯಾನರಿಗೆ ಬೆಂಕಿ!

Share
InShot_20250711_114348447-1024x1024 ಬಾಕಿ ಸಾಲ ಕೇಳಿದ ವ್ಯಾಪಾರಿ ಮೇಲೆ ಕೋಪ:              ಅಂಗಡಿ ಬ್ಯಾನರಿಗೆ ಬೆಂಕಿ!

ಬೆಳ್ತಂಗಡಿ : ಅಂಗಡಿಯ ಬದಿಯಲ್ಲಿ ಜಾಹೀರಾತು ಇರಿಸಿದ್ದ ಬ್ಯಾನರ್ ಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಜುಲೈ 10ರಂದು ಬೆಳಗ್ಗಿನ ಜಾವ ಗುರುವಾಯನಕೆರೆಯಲ್ಲಿ ನಡೆದಿದೆ.
ಕೃತ್ಯಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ಸದಕತುಲ್ಲಾ ಎಂಬವರಿಗೆ ಸೇರಿದ ಜಿ.ಕೆ.ಸ್ಟೋರ್ ಹೆಸರಿನ ಅಂಗಡಿ ಬದಿಯಲ್ಲಿ ಇರಿಸಲಾಗಿದ್ದ ಜಾಹೀರಾತು ಬ್ಯಾನರ್ ಗೆ ಜುಲೈ 10 ರಂದು ಬೆಳಗ್ಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ಕಿಡಿಗೇಡಿಯೊರ್ವ ಬೆಂಕಿ ಹಚ್ಚಿದ್ದ ಓಡಿಹೋಗಿದ್ದ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜುಲೈ 10 ರಂದು ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಮಾಲೀಕ ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕೃತ್ಯದ ಸಂಪೂರ್ಣ ದೃಶ್ಯ ಸೆರೆಯಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಂಗಡಿ ಮಾಲೀಕ ಸದಕತುಲ್ಲಾ ಎಂಬವರು ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಕಿ ಹಚ್ಚಿದ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮ ಕಟ್ಟೆ ನಿವಾಸಿ ಉಮೇಶ್ ಬಂಗೇರ(29) ಎಂಬಾತನೆಂದು ಸಿಸಿ ಕ್ಯಾಮೆರಾ ಆಧರಿಸಿ ಗುರುತಿಸಲಾಗಿದೆ.
ಈತನನ್ನು ಬೆಳ್ತಂಗಡಿ ಪೊಲೀಸರು ಜುಲೈ10 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಹಿಂದೆ ಆರೋಪಿ ಹೊಟೇಲ್ ನಡೆಸುತ್ತಿದ್ದು‌‌
ಇದೇ ಅಂಗಡಿಯಿಂದ 38 ಸಾವಿರದ ದಿನಸಿಗಳನ್ನು ಖರೀದಿಸಿದ ಹಣ ಬಾಕಿ ಇರಿಸಿದ್ದು ಜುಲೈ 9 ಬಾಕಿ ಹಣವನ್ನು ಅಂಗಡಿ ಮಾಲೀಕ ಒಳ್ಳೆಯ ರೀತಿಯಲ್ಲಿ ಕೊಡುವಂತೆ ಕರೆ ಮಾಡಿ ಮನವಿ ಮಾಡಿದ್ದರು.
ಈ ವಿಚಾರದಿಂದ ಕೋಪಗೊಂಡು ಬೆಂಕಿ ಹಚ್ಚಿರುವುದು ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.
ಬೆಂಕಿ ಹಚ್ಚಿದಾಗ ಪಕ್ಕದಲ್ಲಿ ಕಾರು ನಿಲ್ಲಿಸಲಾಗಿದ್ದು ಅದಲ್ಲದೆ ಅಂಗಡಿಗೆ ಬೆಂಕಿ ತಗುಲದೆ ಯಾವುದೇ ದೊಡ್ಡ ಅನಾಹುತ ಉಂಟಾಗಿಲ್ಲ ಎಂದು ಮಾಲೀಕ ಸದಕತುಲ್ಲಾ ಹೇಳಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ , ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಹಾಗೂ ಸಿಬ್ಬಂದಿ ಮತ್ತು ಮಂಗಳೂರು ಎಫ್ಎಸ್ಎಲ್ ವಿಭಾಗದ ಸೋಕೋ ಸಿಬ್ಬಂದಿ ಅರ್ಪಿತಾ, ಕಾವ್ಯಶ್ರೀ,
ಸುಮನ್ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!