ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರು : ಉಸ್ತುವಾರಿ ಸಚಿವರಿಗೆ ಅಭಿನಂದನೆ

ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರು : ಉಸ್ತುವಾರಿ ಸಚಿವರಿಗೆ ಅಭಿನಂದನೆ

Share
IMG-20250711-WA0012-1024x461 ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರು :   ಉಸ್ತುವಾರಿ ಸಚಿವರಿಗೆ ಅಭಿನಂದನೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ಸರ್ಕಾರ ಮಂಜೂರು ಗೊಳಿಸಿದ್ದು ಮಂಜೂರಾತಿ ಗೊಳಿಸುವಲ್ಲಿ ಸಂಪೂರ್ಣ ಸಹಕರಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಮಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್ ಮಾಲಾಡಿ ದ.ಕ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಶೇಖರ್ ಕುಕ್ಕೆಡಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ.ಎಮ್. ನಾಗೇಶ್ ಕುಮಾರ್ ಗೌಡ, ಎಂ.ಜೆ.ಎಂ. ಜುಮ್ಮಾ ಮಸೀದಿ ಕಕ್ಕಿಂಜೆ ಇದರ ಉಪಾಧ್ಯಕ್ಷ ರಾದ ಇಲ್ಯಾಸ್ ಕಕ್ಕಿಂಜೆ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನ ಇಂಟಕ್ ಘಟಕದ ಅಧ್ಯಕ್ಷ ಬಿ ಅಶ್ರಫ್ ನೆರಿಯಾ, ಎಂ.ಜೆ. .ಎಂ ಜುಮ್ಮಾ ಮಸೀದಿ ಕಕ್ಕಿಂಜೆ ಇದರ ಗೌರವ ಅಧ್ಯಕ್ಷ ರಾದ.ಕೆ.ಎ. ರಹಿಮಾನ್, ಕಕ್ಕಿಂಜೆ ಅಣಿಯೂರು ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಖಾದರ್ ಬೀಟಿಗೆ, ಪ್ರಮುಖರಾದ ಸಂಶುದ್ದೀನ್ ಬೀಟಿಗೆ ಕಕ್ಕಿಂಜೆ ಅಣಿಯೂರು ಶಾಲೆ ಎಸ್ ಡಿ ಎಂ ಸಿ ಸದಸ್ಯ ಹಕೀಂ ಜಿ ಕೆ. ಪ್ರಮುಖರಾದ ರತ್ನಾಕರ ಪೂಜಾರಿ ಚಿಬಿದ್ರೆ, ಜೋಯಿ ಜೋಯಲ್ ಕಾಂಜಾಲ್ ಚಿಬಿದ್ರೆ ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!