“ಧರ್ಮಸ್ಥಳದಲ್ಲಿನೂರಾರು ಶವಗಳನ್ನು ಹೂತು ಹಾಕಿದ್ದು ತೋರಿಸುವೆ..” ಎಂದ ವ್ಯಕ್ತಿ ಬೆಳ್ತಂಗಡಿ ಕೋರ್ಟ್ ಗೆ ಹಾಜರು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಹೆಣ್ಣು ಮಕ್ಕಳ ಶವಗಳೂ ಸೇರಿದಂತೆ
ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದನ್ನು ತೋರಿಸುವುದಾಗಿ ತನಗೆ ಪ್ರಾಣ ಬೆದರಿಕೆ ಇದೆ, ರಕ್ಷಣೆ ಒದಗಿಸಬೇಕು ಎಂದು ದ.ಕ. ಎಸ್.ಪಿ. ಅವರಿಗೆ ವಕೀಲರ ಮೂಲಕ ಲಿಖಿತ ಹೇಳಿಕೆ ನೀಡಿದ್ದ ವ್ಯಕ್ತಿಯು ಶುಕ್ರವಾರ ವಕೀಲರ ಮೂಲಕ ಬೆಳ್ತಂಗಡಿ
ಪ್ರಧಾನ ಹಿರಿಯ ವ್ಯಾವಹಾರಿಕ (PSCJ) ನ್ಯಾಯಾಧೀಶರಾದ ಸಂದೇಶ್ ಕೆ ಅವರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾನೆ.
ಈತ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಧರ್ಮಸ್ಥಳದಲ್ಲಿ ಕೆಲವು ವರ್ಷಗಳ ಹಿಂದೆ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ನಿಗೂಢ ಸಾವುಗಳ ಅನೇಕ ಶವಗಳನ್ನು ಬಲವಂತ ಮತ್ತು ಬೆದರಿಕೆಯಿಂದ ಹೂತು ಹಾಕಿದ್ದ ಹಲ್ಲೆಗೊಳಗಾಗಿ ದೌರ್ಜನ್ಯ ಬೆದರಿಕೆ ಸಹಿಸಿಕೊಳ್ಳಲಾಗದೆ ರಾತ್ರೋ ರಾತ್ರಿ ಕುಟುಂಬ ಸಮೇತ ಧರ್ಮಸ್ಥಳ ತೊರೆದಿದ್ದ ವ್ಯಕ್ತಿಯೊಬ್ಬರು ಜುಲೈ 3 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಹೋಗಿ ತನಗೆ ತಿಳಿದಿರುವ ಆತಂಕಕಾರಿ ಮಾಹಿತಿಗಳನ್ನು ನಮೂದಿಸಿ ವಕೀಲರ ಮೂಲಕ ದೂರು ನೀಡಿದ್ದರು.
ಇದೇ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು NC ಮಾಡಿ ಹಿಂಬರಹ ನೀಡಿ ದ.ಕ.ಎಸ್.ಪಿ. ಅವರ ಸೂಚನೆಯಂತೆ ಜುಲೈ 4 ರಂದು ಬೆಳ್ತಂಗಡಿ ನ್ಯಾಯಾಲಯದಿಂದ ದೂರಿನ ಬಗ್ಗೆ ಅನುಮತಿ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS 2023(u/s-211(a)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಜುಲೈ 11 ರಂದು (ಇಂದು) ಸಂಜೆ 4:40 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಇಬ್ಬರು ವಕೀಲರ ಜೊತೆ ಹಾಜರಾಗಿದ್ದು
ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ಹಾಜರಾಗಿ BNS 183 ಹೇಳಿಕೆ ನೀಡುತ್ತಿದ್ದಾನೆ.
ದ.ಕ. ಎಸ್ಪಿಗೆ ನೀಡಿರುವ ದೂರಿನ ಬಗ್ಗೆ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಸಚಿನ್ ದೇಶಪಾಂಡೆ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ “ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಂಥ ಪ್ರಕರಣ ಮತ್ತೊಂದು ಇರಲಾರದು” ಎಂದಿದ್ದರು. ಇದೊಂದು ಚಾರಿತ್ರಿಕ ಪ್ರಕರಣವಾಗಿ ಸಂಚಲನ ಮೂಡಿಸಿತ್ತು.
ಇದೀಗ ಪ್ರಕರಣದ ಸಂಭಾವ್ಯ ಬೆಳವಣಿಗೆಯ ಬಗ್ಗೆ ಕುತೂಹಲ ಮೂಡಿದೆ.
Post Comment