ಧರ್ಮಸ್ಥಳ ನೂರಾರು ಶವಗಳ ಕಾನೂನು ಬಾಹಿರವಾಗಿ ದಫನ ಪ್ರಕರಣ: ಬೇಡಿಕೆಗೆ ಮಣಿದ ರಾಜ್ಯ ಸರ್ಕಾರ

ಧರ್ಮಸ್ಥಳ ನೂರಾರು ಶವಗಳ ಕಾನೂನು ಬಾಹಿರವಾಗಿ ದಫನ ಪ್ರಕರಣ: ಬೇಡಿಕೆಗೆ ಮಣಿದ ರಾಜ್ಯ ಸರ್ಕಾರ

Share
InShot_20250720_163524043-1024x974 ಧರ್ಮಸ್ಥಳ ನೂರಾರು ಶವಗಳ ಕಾನೂನು ಬಾಹಿರವಾಗಿ ದಫನ ಪ್ರಕರಣ: ಬೇಡಿಕೆಗೆ ಮಣಿದ ರಾಜ್ಯ ಸರ್ಕಾರ

News ಕೌಂಟರ್

ಪ್ರಣವ್ ಮೊಹಾಂತಿ ಐಪಿಎಸ್ ನೇತೃತ್ವದ ಎಸ್. ಐ.ಟಿ. ತನಿಖೆಗೊಪ್ಪಿಸಿ ಆದೇಶ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಮತ್ತು ಅತ್ಯಾಚಾರಕ್ಕೊಳಗಾದ ನೂರಾರು ಮೃತದೇಹಗಳನ್ನು ಕಾನೂನು ಬಾಹಿರವಾಗಿ ದಫನ ಮಾಡಿರುವ ಪ್ರಕರಣ ಕೊನೆಗೂ ಹಲವಾರು ಸಂಘಟನೆಗಳ, ಹೋರಾಟಗಾರರ, ಸಂತ್ರಸ್ತರ ಬೇಡಿಕೆಗೆ ಮಣಿದ ಮಾನ್ಯ ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರ ಇಂದು ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್.ಐ.ಟಿ.) ರಚಿಸಿ ಜುಲೈ 19ನೇ ಭಾನುವಾರ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಮತ್ತು ಅತ್ಯಾಚಾರಕ್ಕೊಳಗಾದ ನೂರಾರು ಮೃತದೇಹಗಳನ್ನು ಹೂತಿರುವುದಾಗಿಯೂ ತನಗೆ ಸೂಕ್ತ ರಕ್ಷಣೆ ಕಾನೂನಾತ್ಮಕ ಸುರಕ್ಷತೆ ಒದಗಿಸಿದ್ರೆ
ಕಾನೂನು ಬಾಹಿರವಾಗಿ ದಫನ ಮಾಡಿರುವುದನ್ನು ತೋರಿಸುವುದಾಗಿಯೂ ವಕೀಲರ ಮೂಲಕ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದರು. ಮತ್ತು ಅಸ್ಥಿ ಪಂಜರವನ್ನು ಎಫ್ ಎಸ್ ಎಲ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.

ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ನೀಡಿ ಬೆಳ್ತಂಗಡಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಇದೀಗ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿದೆ. ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ
ಎಸ್.ಐ.ಟಿ. ಯಲ್ಲಿ ಐಪಿಎಸ್ ಅಧಿಕಾರಿಗಳಾದ ಎಂ.ಎನ್. ಅನುಚೇತ್, ಜಿತೇಂದ್ರ ಕುಮಾರ್ ದಯಾಮ, ಸೌಮ್ಯ ಲತಾ ಮುಂತಾದವರಿದ್ದಾರೆ.

ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್ ತಿಳಿಸಿದ್ದಾರೆ.

ವಿಶೇಷ ತನಿಖಾ ಸಂಸ್ಥೆ (SIT) ಯ ಮುಖ್ಯಸ್ಥರಾಗಿ ಐಪಿಎಸ್‌ ಪ್ರಣವ ಮೋಹಾಂತಿ ಹಾಗೂ ಸದಸ್ಯರಾಗಿ ಐಪಿಎಸ್ ಗಳಾದ ಎಂ.ಎನ್. ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾ‌ರ್ ದಯಾಮ ರವರನ್ನು ಸರಕಾರ ನೇಮಿಸಿದೆ.

Post Comment

ಟ್ರೆಂಡಿಂಗ್‌

error: Content is protected !!