ಧರ್ಮಸ್ಥಳದಲ್ಲಿ ಶವಗಳೊಂದಿಗೆ ಹೂತು ಹೋದ ಕಟುಸತ್ಯಗಳು ಹೊರಬರಲಿ: ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಅನಾಮಿಕ ವ್ಯಕ್ತಿ ಪೊಲೀಸರಿಗೆ ನೀಡಿದ ದೂರು ಮತ್ತು ಕೋರ್ಟ್ ನಲ್ಲಿ ನೀಡಿದ ಹೇಳಿಕೆಯಂತೆ ನಾಲ್ವರು ದಕ್ಷ ಐ.ಪಿ.ಎಸ್ . ಅಧಿಕಾರಿಗಳಿರುವ ವಿಶೇಷ ತನಿಖಾ ತಂಡವನ್ನು (SIT) ರಾಜ್ಯ ಸರಕಾರ ರಚಿಸಿರುವುದನ್ನು ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ & ನಾಗರಿಕ ಸೇವಾ ಟ್ರಸ್ಟ್ ಸ್ವಾಗತಿಸಿದೆ.
ಧರ್ಮಸ್ಥಳದಲ್ಲಿ ಹೂತಿರುವ ಶವಗಳೊಂದಿಗೆ ಹೂತು ಹೋದ ಕಟುಸತ್ಯಗಳು ಎಸ್ ಐ ಟಿ ತನಿಖೆಯ ಮೂಲಕ ಹೊರಬರಲಿ, ನೊಂದ ಕುಟುಂಬಗಳಿಗೆ ನ್ಯಾಯ ಸಿಗಲಿ ಹಾಗೂ ದುಷ್ಕೃತ್ಯಗಳ ಹಿಂದಿರುವ ಅಮಾನವೀಯ ಕೂಟಕ್ಕೆ ಶಿಕ್ಷೆಯಾಗಲಿ ತನಿಖೆಯಲ್ಲಿ 2 -3 ಹೆಣಗಳು ಹೊರಬಂದರೂ ಹೋರಾಟಗಾರರಿಗೆ ಜನತಾ ನ್ಯಾಯಾಲಯದಲ್ಲಿ ಜಯ ಸಿಕ್ಕಿದಂತೆ, ತನಿಖೆಯಿಂದ ನೂರಾರು ಅಕ್ರಮ, ಅನ್ಯಾಯ, ದೌರ್ಜನ್ಯಗಳ ಹಿಂದಿರುವ ಕರಾಳತೆ ಅನಾವರಣವಾಗಲಿ ಎಂದು ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ & ನಾಗರಿಕ ಸೇವಾ ಟ್ರಸ್ಟ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.















Post Comment