ಬೆಳ್ತಂಗಡಿ; ಗ್ರಾಮಾಡಳಿತಾಧಿಕಾರಿಗಳಿಗೆ ಕಂದಾಯ ಇಲಾಖೆ ವತಿಯಿಂದ ಲ್ಯಾಪ್‌ಟಾಪ್ ವಿತರಣೆ

ಬೆಳ್ತಂಗಡಿ; ಗ್ರಾಮಾಡಳಿತಾಧಿಕಾರಿಗಳಿಗೆ ಕಂದಾಯ ಇಲಾಖೆ ವತಿಯಿಂದ ಲ್ಯಾಪ್‌ಟಾಪ್ ವಿತರಣೆ

Share
InShot_20250721_143959990-994x1024 ಬೆಳ್ತಂಗಡಿ; ಗ್ರಾಮಾಡಳಿತಾಧಿಕಾರಿಗಳಿಗೆ ಕಂದಾಯ ಇಲಾಖೆ ವತಿಯಿಂದ ಲ್ಯಾಪ್‌ಟಾಪ್ ವಿತರಣೆ

‘ಭೂಸುರಕ್ಷಾ’ ಯೋಜನೆಯಡಿ ಕಂದಾಯ ದಾಖಲೆಗಳ ನಕಲು

ಬೆಳ್ತಂಗಡಿ : ಕಂದಾಯ ಇಲಾಖೆಯ ಮೂಲಕ ರಾಜ್ಯ ಸರ್ಕಾರ ವತಿಯಿಂದ 13 ಗ್ರಾಮಾಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ಹಾಗೂ ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ನಕಲು ಪ್ರತಿ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.
ಈ ಸಂದರ್ಭ 13 ಮಂದಿ ಗ್ರಾಮಾಡಳಿತಾಧಿಕಾರಿಗಳಿಗೆ ಶಾಸಕ ಹರೀಶ್ ಪೂಂಜ ಲ್ಯಾಪ್‌ಟಾಪ್ ಹಾಗೂ ಫಲಾನುಭವಿಗಳಿಗೆ
ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ನಕಲು ಪ್ರತಿ ವಿತರಿಸಿ ಮಾತನಾಡಿ ಕಂದಾಯ ಇಲಾಖೆಯ ಕೆಲಸಗಳನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ಕಂದಾಯ ಸಚಿವರು ಚಿಂತನೆ ನಡೆಸಿ ಗ್ರಾಮಾಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದರು.

ಇದೀಗ ಹೊಸದಾಗಿ ನೇಮಕಾತಿಗೊಂಡ 8 ಜನ ಗ್ರಾಮಾಡಳಿತ ಅಧಿಕಾರಿಗಳೂ ಸೇರಿ ಒಟ್ಟು 32 ಮಂದಿ ಗ್ರಾಮಾಡಳಿತಾಧಿಕಾರಿಗಳು ತಾಲೂಕಿನ ಜನತೆಗೆ ಸೇವೆಗೆ ಸಿಗಲಿದ್ದಾರೆ ಎಂದರು.
ಹೊಸದಾಗಿ ನೇಮಕಗೊಂಡು ಬಂದ ತರಬೇತಿಯಲ್ಲಿರುವ 8 ಮಂದಿ ಗ್ರಾಮಾಡಳಿತಾಧಿಕಾರಿಗಳಿಗೆ ಶಾಸಕರು ಸ್ವಾಗತಿಸಿ ಅಭಿನಂದಿಸಿದರು.

ತಹಶಿಲ್ದಾರರಿಗೆ ದೊಡ್ಡ ಗ್ರಾಮಗಳಿಗೆ ಒಬ್ಬೊಬ್ಬರನ್ನು ಹಾಗೂ ಎರಡು ಮೂರು ಚಿಕ್ಕ ಚಿಕ್ಕ ಗ್ರಾಮಗಳಿಗೆ ಒಬ್ಬರಂತೆ ಹೊಸ ಗ್ರಾಮಾಡಳಿತಾಧಿಕಾರಿಗಳನ್ನು ನಿಯೋಜಿಸುವಂತೆ ಶಾಸಕರು ತಹಶಿಲ್ದಾರರಿಗೆ ಸೂಚಿಸಿದರು.
ಈ ಸಂದರ್ಭ ಬೆಳ್ತಂಗಡಿ ತಾಲೂಕಿನ 25 ಲಕ್ಷ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ , ಲಕ್ಷಾಂತರ ಕಡತಗಳನ್ನು ಗಣಕೀಕೃತ ಗೊಳಿಸುತ್ತಿದ್ದಾರೆ ಎಂದು‌ ಸಿಬ್ಬಂದಿ ಮಾಹಿತಿ ನೀಡಿದರು. ಬಳಿಕ ಶಾಸಕರ ಅಧ್ಯಕ್ಷತೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಬೈಠಕ್ ನಡೆಯಿತು.
ವೇದಿಕೆಯಲ್ಲಿ ತಹಶಿಲ್ದಾರ್ ಪೃಥ್ವಿ ಸಾನಿಕಂ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ವಿನುತಾ ರಜತ್, ಶ್ರೀಧರ್ ಕಳೆಂಜ, ಅಯೂಬ್ ಕಂದಾಯ ನಿರೀಕ್ಷಕ ಪವಾಡಪ್ಪ ಮತ್ತಿತರ ಸಿಬ್ಬಂದಿಗಳು, ಗ್ರಾಮಾಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!