ಬೆಳಾಲು ; ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ : ಅಪಾಯದಿಂದ ಪಾರು

ಬೆಳಾಲು ; ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ : ಅಪಾಯದಿಂದ ಪಾರು

Share
IMG-20250721-WA0010-768x1024 ಬೆಳಾಲು ; ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ : ಅಪಾಯದಿಂದ ಪಾರು

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಜೀಪೊಂದು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಘಟನೆ ಬೆಳಾಲು ದೊಂಪದ ಪಲ್ಕೆ (ಮೀನಂದೇಲು) ಬಳಿ ಸೋಮವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ದೊಂಪದಪಲ್ಕೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಚರಂಡಿಗೆ ಉರುಳಿದ್ದು ಅವಘಡದಲ್ಲಿ ಬಂದಾರು ಗ್ರಾಮದ ಬೈಪಾಡಿ ಸಮೀಪದ ನಿವಾಸಿ ಭಾರತೀಯ ಸೇನಾ ಯೋಧ ಲಿಂಗಪ್ಪ ಎಂಬವರು ಗಾಯಗೊಂಡಿದ್ದಾರೆ. ರಜೆಯಲ್ಲಿರುವ ಸೇನಾ ಯೋಧ ಲಿಂಗಪ್ಪ ಅವರು ಜೀಪಿನಲ್ಲಿ ಹೋಗಿ ಬರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಪರಿಣಾಮ ಜೀಪ್ ಉರುಳಿ ಅಪಘಾತ ಸಂಭವಿಸಿದೆ.
ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Post Comment

ಟ್ರೆಂಡಿಂಗ್‌

error: Content is protected !!