ಕೊಲ್ಪಾಡಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

ಕೊಲ್ಪಾಡಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

Share
IMG-20250723-WA0009-1024x461 ಕೊಲ್ಪಾಡಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ


ಬೆಳಾಲು : ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಕುಂಡಡ್ಕ ಅರಣ್ಯ ಸಮಿತಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಜುಲೈ 23 ರಂದು ನಡೆಸಲಾಯಿತು. ಬೆಳಾಲು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಾವು, ಅಶ್ವಥ, ಹುಣಸೆ,ಕಾಡು ದಾಸವಾಳ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯರು ನಾಟಿ ಮಾಡಿದರು‌.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳಾದ ಜೆರಾಲ್ಡ್ ಡಿಸೋಜಾ ಗಸ್ತು ಅರಣ್ಯ ಪಾಲಕರಾದ ಕೆ.ಎನ್.ಜಗದೀಶ್, ಅರಣ್ಯ ವೀಕ್ಷಕ ಸಂತೋಷ್, ಕುಂಡಡ್ಕ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ಗಂಗಾಧರ ಗೌಡ ಸೇರಿದಂತೆ ಹೆಚ್ಚಿನ ಸದಸ್ಯರು, ವಿದ್ಯಾರ್ಥಿಗಳು, ಪಾಲ್ಗೊಂಡರು. ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ಸ್ವಾಗತಿಸಿದರು. ಶಿಕ್ಷಕರಾದ ದಿನೇಶ್,ಕೆ ಹಾಗೂ ಕರಿಯಣ್ಣ ಗೌಡ ಸಹಕರಿಸಿದರು.

Post Comment

ಟ್ರೆಂಡಿಂಗ್‌

error: Content is protected !!