ಪೊಲೀಸ್ ಕಸ್ಟಡಿ ಮುಕ್ತಾಯ : ಕೇರಳದ ನಕ್ಸಲ್ ನಾಯಕ ರೂಪೇಶ್ ಕೋರ್ಟ್ ಗೆ ಹಾಜರು

ಬಿಗಿ ಭದ್ರತೆಯಲ್ಲಿ ಮತ್ತೆ ಕೇರಳ ಜೈಲಿಗೆ
ಬೆಳ್ತಂಗಡಿ : ದಕ್ಷಿಣ ಭಾರತದ ನಕ್ಸಲ್ ಚಳುವಳಿಯ ಪ್ರಮುಖ ನಾಯಕ ರೂಪೇಶ್.ಪಿ.ಆರ್ (57) ಕೇರಳ ಜೈಲಿನಿಂದ ಜುಲೈ 22 ರಂದು ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ಪಡೆದಿದ್ದರು.
2012ರ ಡಿಸೆಂಬರ್ 10ರಂದು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳೆ ಪ್ರದೇಶದಲ್ಲಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮಹಜರು ನಡೆಸಿ ತನಿಖೆ ನಡೆಸಿದ್ದರು. ಜುಲೈ 24 ರಂದು ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬಿಗಿ ಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕೇರಳ ಜೈಲಿಗೆ ಪ್ರಯಾಣ ಬೆಳಿಸಿದ್ದಾರೆ.















Post Comment