ರಾಜಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ವತಿಯಿಂದ ಆಟಿದ ಕಷಾಯ, ಮೆಂತ್ಯೆ ಗಂಜಿ ವಿತರಣೆ

ರಾಜಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ವತಿಯಿಂದ ಆಟಿದ ಕಷಾಯ, ಮೆಂತ್ಯೆ ಗಂಜಿ ವಿತರಣೆ

Share
InShot_20250724_131305076-991x1024 ರಾಜಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ವತಿಯಿಂದ ಆಟಿದ ಕಷಾಯ, ಮೆಂತ್ಯೆ ಗಂಜಿ ವಿತರಣೆ

ಬೆಳ್ತಂಗಡಿ : ತಾಲೂಕು ಇದರ ವತಿಯಿಂದ ನಡೆದ ರಾಜ ಕೇಸರಿ ಸಂಘಟನೆ ಸಂಸ್ಥಾಪಕರ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 566 ಸೇವಾ ಯೋಜನೆಯ ಮೂಲಕ ನಡೆದಂತಹ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಆಟಿದ ಕಷಾಯ ಮತ್ತು ಮೆಂತ್ಯೆ ಗಂಜಿ ವಿತರಣೆ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜಕೇಸರಿ ಟ್ರಸ್ಟ್ ರಿ ಇದರ ಜಿಲ್ಲಾಧ್ಯಕ್ಷ ಸಂತೋಷ್ ಕೂಲ್ಯ ನೆರೆವೇರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ಉದ್ಯಮಿ ಕಿರಣ್ ಚಂದ್ರಡಿ ಪುಷ್ಪಗಿರಿ ಇವರು ಮಾತನಾಡಿ ಸದಾ ಜನರಿಂದ ಜನರಿಗೋಸ್ಕರ ಸೇವೆಯನ್ನು ಮಾಡುತ್ತಿರುವ ಒಂದು ಸಂಘಟನೆ ಅಂದರೆ ದೀಪಕ್ ಜಿ ಬೆಳ್ತಂಗಡಿಯವರ ಮುನ್ನಡೆಸುತ್ತಿರುವಂತಹ ರಾಜಕೇಸರಿ ಸಂಘಟನೆ ಎಂದರು.
ಈ ಕಾಲದಲ್ಲಿ ಇಂತಹ ಕಾರ್ಯಕ್ರಮಗಳು ನಶಿಸಿ ಹೋಗುತ್ತಿದೆ ಇದನ್ನು ಉಳಿಸುವ ನಿಟ್ಟಿನಲ್ಲಿ ಇವತ್ತು ಬೆಳಿಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆ ತನಕ ಸರಿಸುಮಾರು 500 ಕ್ಕಿಂತ ಅಧಿಕವಾಗಿ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ.. ಬೆಳ್ತಂಗಡಿ ತಾಲೂಕು ಪತ್ರಕರ್ತರ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ವಿಜಯವಾಣಿ ದಿನಪತ್ರಿಕೆಯ ವರದಿಗಾರರಾದ ಮನೋಹರ್ ಬಳಂಜ ಸರ್ವಧರ್ಮದ ಗುರುಗಳು, ಹಾಗೂ ಧಾರ್ಮಿಕ ಮುಖಂಡರಗಳು, ಸಂಘ ಸಂಸ್ಥೆಗಳು, ಕೆ ಎಸ್ ಆರ್ ಟಿ ಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭವರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸತೀಶ್ ಕಂಗಿತ್ತಿಲ್
ಹಾಗೂ ರಾಜ ಕೇಸರಿ ಸಂಘಟನೆಯ ಪದಾಧಿಕಾರಿಗಳಾದ
ಪ್ರೇಮ್ ರಾಜ್, ರೋಷನ್ ಸ್ರಿಕ್ಕೇರಾ, ಪ್ರಶಾಂತ್ ಗುರುವಾಯನಕೆರೆ,
ಸಂಪತ್, ಜಗದೀಶ್, ವಿನೋದ್ ಲೈಲಾ .ಸಂದೇಶ್. ಗಣೇಶ್ ‌. ಕಿಶನ್, ದೇವರಾಜ್, ಹಾಗೂ ರಾಜ ಕೇಸರಿ ಜಿಲ್ಲಾ ಪದಾಧಿಕಾರಿಗಳಾದ ಲೋಕೇಶ್ ಮಂಗಳದೇವಿ , ವರುಣ್ ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!