ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಮೊದಲೆ – ಸಬರಬೈಲು- ಪಡಂಗಡಿ ಸಂಪರ್ಕ ಸೇತುವೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಆದ್ಯತೆ ನೆಲೆಯಲ್ಲಿ ಸಂಪರ್ಕ ಸೇತುವೆ ಕಾಮಗಾರಿ ಆರಂಭಿಸಲು ಒತ್ತಾಯ
ಬೆಳ್ತಂಗಡಿ : ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಸೋಣಂದೂರು ಗ್ರಾಮದ
ಮೊದಲೆ -ಸಬರಬೈಲು- ಪಡಂಗಡಿ ಸಂಪರ್ಕ ಸೇತುವೆಯ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಸೋಣಂದೂರು ಗ್ರಾಮದ ಮೊದಲೆ – ಸಬರಬೈಲು- ಪಡಂಗಡಿ ಸಂಪರ್ಕ ಸೇತುವೆ ಮುರಿದು ಬಿದ್ದು ಸಂಪರ್ಕ ಕಡಿತಗೊಂಡು
ಇದುವರೆಗೂ ದುರಸ್ತಿಯಾಗದೆ ಉಳಿದಿದ್ದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾದ 10 ಕೋಟಿ ರೂ. ಅನುದಾನದಲ್ಲಿ ಮೊದಲ ಆದ್ಯತೆಯಲ್ಲಿ ಸೇತುವೆಯನ್ನು ನಿರ್ಮಿಸಬೇಕೆಂದು ಒತ್ತಾಯಿಸಿ ಮಾಲಾಡಿ -ಸೋಣಂದೂರು ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಸೇತುವೆ ಕುಸಿದ ಜಾಗದಲ್ಲಿ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದರು.
ಇದೀಗ 2024 -25 ನೇ ಸಾಲಿನಲ್ಲಿ ಲೆ.ಶೀ. 5054 ರಡಿ ರಾಜ್ಯದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ ಸೇತುವೆ ಹಾಗೂ ಚರಂಡಿ ಕಾಮಗಾರಿಗಳಿಗಾಗಿ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೊಂಡಿದ್ದು ಮಾಡಿದ್ದು
ಪ್ರತಿಭಟನೆಯಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಅಧ್ಯಕ್ಷ ಸದಸ್ಯ ಎಸ್.ಬೇಬಿ ಸುವರ್ಣ, ಬೆನಡಿಕ್ಟಾ ಮಿರಾಂದ, ಉಮೇಶ್ ಕೆಡಿಪಿ ಸದಸ್ಯ ಮೇಲ್ವಿನ್ ಸಿಕ್ವೆರಾ ಪಡಂಗಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶರೀಫ್ ಸಬರಬೈಲು, ಪ್ರಮುಖರಾದ ಹೃಷಿಕೇಶ್ ಜೈನ್ ಪಡಂಗಡಿ, ಮಹಮ್ಮದ್ ಅಲಿ ಕೋಲ್ಪೆದಬೈಲು ಮ್ಯಾಕ್ಸಿಮ್ ಸಿಕ್ವೆರಾ ಪಡಂಗಡಿ ಪ್ರಕಾಶ್ ಶೆಟ್ಟಿ, ಗೋಪಣ್ಣ ಪೂಜಾರಿ, ಬ್ಯಾಪಿಸ್ಟ್ ಕರ್ನಾಲಿಯೋ, ಶಬ್ಬೀರ್ ಕನ್ನಡಿಕಟ್ಟೆ, ಬಾಜಿಲ್ ಫೆರ್ನಾಂಡಿಸ್, ಉದಯ್ ಶೆಟ್ಟಿ ಜೆ.ಎಮ್ ಶಂಕರ್ ಮಾಲಾಡಿ, ಅಲ್ತಾಫ್ ಕೋಲ್ಪೆದಬೈಲು, ಅಹ್ಮದ್ ಪೊಮ್ಮಜೆ, ಆದಂ ಬ್ಯಾರಿ ಮೊದಲೆ, ಅಬ್ದುಲ್ ರಹಿಮಾನ್ ಮೊಧಲೆ, ಗೋಪಾಲ್ ಕೋಟ್ಯಾನ್, ಥೋಮಸ್ ಕರ್ನಾಲಿಯೋ, ಇಬ್ರಾಹಿಂ ಪಡಂಗಡಿ, ಮಾಲಾಡಿ, ಸೋಣಂದೂರು ಮತ್ತು ಪಡಂಗಡಿ ಗ್ರಾಮಸ್ಥರು ಭಾಗವಹಿಸಿದರು.
Post Comment