ಬೆಳ್ತಂಗಡಿ ದಲಿತ ಮುಖಂಡರ ನಿಯೋಗದಿಂದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ:

ಬೆಳ್ತಂಗಡಿ ದಲಿತ ಮುಖಂಡರ ನಿಯೋಗದಿಂದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ:

Share
InShot_20250725_160754838-1024x1024 ಬೆಳ್ತಂಗಡಿ ದಲಿತ ಮುಖಂಡರ ನಿಯೋಗದಿಂದ                 ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ:

ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣದಲ್ಲಿ ಒಂದು ಸುಸಜ್ಜಿತವಾದ ಅಂಬೇಡ್ಕರ್ ಭವನ ಇಲ್ಲದ ಕಾರಣ ಇದೀಗ ದೊಡ್ಡ ಮಟ್ಟದ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಮೊದಲ ಹಂತದ ಮೂರು ಕೊಟಿ ರೂ .ಅನುದಾನ ಮಂಜೂರಾಗಿದ್ದು ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೆರಿಸಿ ಕೂಡಲೇ ಕಾಮಗಾರಿ
ಆರಂಭಿಸುವಂತೆ ಹಾಗೂ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಉಳಿದ ಅನುದಾನವನ್ನು ಸರಕಾರದಿಂದ ಒದಗಿಸುವಂತೆ ಕರ್ನಾಟಕ ದಲಿತ ಚಳವಳಿ 50 ರ ಸಂಭ್ರಮಾಚರಣಾ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ತಾಲೂಕು ಕೇಂದ್ರವಾದ ಬೆಳ್ತಂಗಡಿಯಲ್ಲಿ 15ಕೋಟಿ ರೂ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಈ ಹಿಂದಿನಿಂದಲೂ ಬೇಡಿಕೆಯನ್ನು ದಲಿತ ಸಂಘಟನೆಗಳು ಇಡುತ್ತಾ ಬಂದಿದ್ದು ಇದೀಗ ಅಂಬೇಡ್ಕರ್ ಭವನಕ್ಕೆ ಭೂಮಿ ಮಂಜೂರಾತಿಯೂ ಆಗಿದೆ.
ಅಂಬೇಡ್ಕರ್ ಭವನಕ್ಕೆ ಕಾದಿರಿಸಿದ ಜಾಗವನ್ನು ಅಂಬೇಡ್ಕರ್ ಭವನದ ಹೆಸರಿನ ಪಹಣಿ ಪತ್ರದಲ್ಲಿ ಕೂಡಲೇ ನಮೂದಿಸುವಂತೆ ದಲಿತ ಮುಖಂಡರ ನಿಯೋಗವು ಸಚಿವರಲ್ಲಿ ವಿನಂತಿಸಿಕೊಂಡಿದ್ದು ಸಚಿವರು ಸ್ಥಳದಲ್ಲೇ ದೂರವಾಣಿ ಮೂಲಕ ಈ ಬಗ್ಗೆ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಎಲ್ಲರ ಬೇಡಿಕೆಯಂತೆ ಕೆ.ಪಿ.ಸಿ.ಸಿ. ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಶಿಫಾರಸ್ಸಿನ ಮೇರೆಗೆ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕರ್ನಾಟಕ ಸರಕಾರದಿಂದ ಮೊದಲ ಹಂತದಲ್ಲಿ ರೂ. 3 ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದಕ್ಕಾಗಿ ರಾಜ್ಯ ಸರಜಾರಕ್ಕೆ ಹಾಗೂ ಉಸ್ತುವಾರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇವೆ.
ಈ ಹಿನ್ನಲೆಯಲ್ಲಿ ಈಗಾಗಲೆ ಬೆಳ್ತಂಗಡಿ ಪಟ್ಟಣದಲ್ಲಿ ಅಂಬೇಡ್ಕರ್ ಭವನದ ಅಗತ್ಯ ತುಂಬಾ ಇದ್ದು ಮೊದಲ ಹಂತದ ಅನುದಾನಕ್ಕೆ ಅನುಗುಣವಾಗಿ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅತೀ ಶೀಘ್ರವಾಗಿ ಶಿಲಾನ್ಯಾಸ ನಡೆಸಿ ಕಾಮಗಾರಿ ಆರಂಭಿಸಲು ಸಂಬಂಧಿಸಿದ ಇಲಾಖೆಗೆ ಆದೇಶ ನೀಡುವಂತೆಯೂ ಹೆಚ್ಚುವರಿಯಾಗಿ 12ಕೋಟಿ ರೂ ಅನುದಾನವನ್ನು ಮಂಜೂರು ಮಾಡುವಂತೆಯೂ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಅಂಬೇಡ್ಕರ್ ಭವನದ ಕುರಿತ ವಿವರಗಳನ್ನು ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ ಹಾಗೂ ನಿಯೋಗದಲ್ಲಿ ಸಂಘಟನೆಯ ಮುಖಂಡರುಗಳಾದ ಬಿ.ಕೆ., ವಸಂತ್, ಶೇಖರ ಕುಕ್ಕೇಡಿ, ಚೆನ್ನಕೇಶವ, ಸಂಜೀವ ಆರ್, ವೆಂಕಣ್ಣ ಕೊಯ್ಯೂರು, ರಮೇಶ್ ಆರ್, ಪ್ರಭಾಕರ ಓಡಲ್ನಾಳ ಮತ್ತಿತರರು ಇದ್ದರು.

Previous post

ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಮೊದಲೆ – ಸಬರಬೈಲು- ಪಡಂಗಡಿ ಸಂಪರ್ಕ ಸೇತುವೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

Next post

ಜಿ.ಎಸ್.ಟಿ. ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ ;ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್ ಬಟಾ ಬಯಲು – ಶಾಸಕ ಹರೀಶ್ ಪೂಂಜ

Post Comment

ಟ್ರೆಂಡಿಂಗ್‌

error: Content is protected !!