ಧರ್ಮಸ್ಥಳ ನೂರಾರು ಶವಗಳ ರಹಸ್ಯ ದಫನ ಪ್ರಕರಣ: ಮೊದಲ ದಿನವೇ 13 ಸಮಾಧಿಗಳನ್ನು ಗುರುತಿಸಿದ ಧೀರ ದೂರುದಾರ

ಬೆಳ್ತಂಗಡಿ : ಧರ್ಮಸ್ಥಳ ನೂರಾರು ಶವಗಳ ರಹಸ್ಯ ದಫನ ಪ್ರಕರಣದ ದೂರುದಾರನಿಂದ ಎರಡು ದಿನಗಳಲ್ಲಿ ಹೇಳಿಕೆ ಪಡೆದ ಡಾ.ಪ್ರಣವ್ ಮೊಹಾಂತಿ ನೇತೃತ್ವದ ಎಸ್ ಐ ಟಿ ತನಿಖಾಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ಎಸ್ ಐ ಟಿ ಕಚೇರಿಗೆ ಆಗಮಿಸಿ ಬಳಿಕ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ 6 ಗಂಟೆಗಳವರೆಗೆ ಸಕಲ ಬಿಗಿ ಭದ್ರತೆಯೊಂದಿಗೆ ವಕೀಲರ ಸಮಕ್ಷಮದಲ್ಲಿ ದೂರುದಾರನ ಪ್ರತ್ಯಕ್ಷ ಮಾಹಿತಿಯ ಆಧಾರದಲ್ಲಿ ಕೆಲವು ವರ್ಷಗಳ ಹಿಂದೆ ರಹಸ್ಶವಾಗಿ ಶವಗಳನ್ನು ಹೂತ
ಸ್ಥಳಗಳ ಪರಿಶೀಲನೆ ನಡೆಸಿದರು.
ನೇತ್ರಾವತಿ ಸ್ನಾನಘಟ್ಟದ ಬಳಿಯ ಸಾರ್ವಜನಿಕ ಸ್ಥಳದಲ್ಲೆ ಮೊದಲನೇ ಮಹಜರಿಗಾಗಿ ಎಸ್ ಐಟಿ ಅಧಿಕಾರಿಗಳಿಗೆ ಸಮಾಧಿ ಸ್ಥಳವನ್ನು ತೋರಿಸಿದ್ದು ಅಚ್ಚರಿ ಮೂಡಿದೆ.
ನೇತ್ರಾವತಿ ಸ್ನಾನಘಟ್ಟದ ಬಳಿಯ ಸಮಾಧಿಯೂ ಸೇರಿ ಒಟ್ಟು 13 ಸಮಾಧಿ ಸ್ಥಳಗಳನ್ನು ಎಸ್ ಐ ಟಿ ಅಧಿಕಾರಿಗಳ ಮುಂದೆ ದೂರುದಾರ ಗುರುತಿಸಿದ್ದು ಇನ್ನಷ್ಟು ರಹಸ್ಯ ಸಮಾಧಿಗಳನ್ನು ಮಂಗಳವಾರ ಗುರುತಿಸಬೇಕಾಗಿದೆ.
ದೂರುದಾರ ಸಮಾಧಿಗಳನ್ನು ಗುರುತಿಸಿದ ಎಲ್ಲಾ ಸ್ಥಳಗಳನ್ನು
ಎಸ್ ಐ ಟಿ ಅಧಿಕಾರಿಗಳು ಕೆಂಪು ಪಟ್ಟಿ ಕಟ್ಟಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಇವತ್ತಿನ ಪರಿಶೀಲನೆ ಮುಗಿಸಿದ್ದೇವೆ, 6ಗಂಟೆಯ ಬಳಿಕ ಪಂಚನಾಮೆ ಮಾಡುವಂತಿಲ್ಲ, ಇನ್ನು ನಾಳೆ ಸಮಾಧಿ ಸ್ಥಳ ಪರಿಶೀಲನೆ ಮುಂದುವರಿಯಲಿದೆ ಎಂದು ಎಸ್ ಐ ಟಿ ಅಧಿಕಾರಿಗಳು ತಿಳಿಸಿದ್ದಾರೆ.
Post Comment