ಧರ್ಮಸ್ಥಳ ನೂರಾರು ಶವಗಳ ರಹಸ್ಯ ದಫನ ಪ್ರಕರಣ : ಅಸ್ಥಿಪಂಜರ ಮೇಲೆತ್ತುವ ಪ್ರಕ್ರಿಯೆ ಆರಂಭ



ಬೆಳ್ತಂಗಡಿ : ಧರ್ಮಸ್ಥಳ ನೂರಾರು ಶವಗಳ ರಹಸ್ಯ ದಫನ ಪ್ರಕರಣದ ತನಿಖೆಯು ಮಂಗಳವಾರ ಇನ್ನಷ್ಟು ಕುತೂಹಲಕರವಾಗಿ ಮುಂದುವರಿಯಲಿದ್ದು ಸರ್ವ ಸನ್ನದ್ಧ ಎಸ್ ಐ ಟಿ ಅಧಿಕಾರಿಗಳ ತಂಡ ನೇತ್ರಾವತಿ ಸ್ನಾನಘಟ್ಟ ಪರಿಸರದ ಕಾಡಿನಲ್ಲಿ ಸೋಮವಾರ ದೂರುದಾರ ಗುರುತಿಸಿದ ಸಮಾಧಿಯಿಂದ ಅಸ್ಥಿಪಂಜರ ಮೇಲೆತ್ತಿ ಫೊರೆನ್ಸಿಕ್ ಪರೀಕ್ಷೆಗೆ ಅಗತ್ಯವಿರುವ ಮಾದರಿಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಸ್ ಐ ಟಿ ಅಧಿಕಾರಿಗಳು ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರ ತಂಡ ಸಹಿತ ಸಮಾಧಿ ಸ್ಥಳಕ್ಕೆ ಆಗಮಿಸಲಿದ್ದಾರೆ.
ಸೋಮವಾರ ಡಾ.ಪ್ರಣವ್ ಕುಮಾರ್ ಮೊಹಾಂತಿ ನೇತೃತ್ವದ
ಎಸ್ ಐ ಟಿ ತನಿಖಾಧಿಕಾರಿಗಳ ತಂಡ ಸೋಮವಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ 6 ಗಂಟೆಗಳವರೆಗೆ
ಸಕಲ ಬಿಗಿ ಭದ್ರತೆಯೊಂದಿಗೆ ವಕೀಲರ ಸಮಕ್ಷಮದಲ್ಲಿ ದೂರುದಾರನ ಪ್ರತ್ಯಕ್ಷ ಮಾಹಿತಿಯ ಆಧಾರದಲ್ಲಿ ಶವಗಳನ್ನು ಹೂತ ಸ್ಥಳಗಳ ಪರಿಶೀಲನೆ ನಡೆಸಿದ್ದರು.
ನೇತ್ರಾವತಿ ಸ್ನಾನಘಟ್ಟದ ಪರಿಸರದ ಕಾಡಿನಲ್ಲಿ ಎಸ್ ಐಟಿ ಅಧಿಕಾರಿಗಳಿಗೆ ಮೊದಲ ಸಮಾಧಿ ಸ್ಥಳವನ್ನು ದೂರುದಾರ ತೋರಿಸಿದ್ದು ಒಟ್ಟು 13 ಸಮಾಧಿ ಸ್ಥಳಗಳನ್ನು ಗುರುತಿಸಲಾಗಿದೆ.
ಇನ್ನಷ್ಟು ರಹಸ್ಯ ಸಮಾಧಿಗಳನ್ನು ಮಂಗಳವಾರ ಗುರುತಿಸಬೇಕಾಗಿದೆ.
ಇಂದಿನ ಮಹಜರು ಮತ್ತು ಅಸ್ಥಿಪಂಜರ ಹೊರ ತೆಗೆಯುವ
ಪ್ರಕ್ರಿಯೆ ಯಲ್ಲಿ ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಸಹಿತ ಮತ್ತಿತರ ಇಲಾಖಾಧಿಕಾರಿಗಳು
ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು
ಇಂದಿನ ಪ್ರಕ್ರಿಯೆ ಕುತೂಹಲ ಮೂಡಿಸಿದೆ.
ಇಂದು ಜುಲೈ 29ರಂದು ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆ ನಡೆಯಲಿದೆ ಎಂದು ಎಸ್.ಐ.ಟಿ ಯ ಉನ್ನತ ಮೂಲಗಳು ಮಾಹಿತಿ ನೀಡಿದೆ.
Post Comment