ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣ: ನೇತ್ರಾವತಿ ಸ್ನಾನಘಟ್ಟ ಕಾಡಿನಲ್ಲಿ ಎರಡನೇ ಸಮಾಧಿ ಶೋಧ ಕಾರ್ಯ ಆರಂಭ



ಬೆಳ್ತಂಗಡಿ : ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣದ ತನಿಖೆಗೆ ಸಂಬಂಧಿಸಿದ ಸಮಾಧಿ ಸ್ಥಳ ಮಹಜರು ಮತ್ತು ಸಮಾಧಿ ಅಗೆತ ತನಿಖೆ ಮೂರನೇ ದಿನವಾದ ಜುಲೈ 30ರ ಬುಧವಾರ ಬೆಳಿಗ್ಗೆ
ಎಸ್ ಐ ಟಿ ಅಧಿಕಾರಿಗಳು ದೂರುದಾರ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಕಲ ಭದ್ರಾತಾ ಅಧಿಕಾರಿಗಳೊಂದಿಗೆ ನೇತ್ರಾವತಿ ಸ್ನಾನಘಟ್ಟಕ್ಕೆ ತಲುಪಿದ್ದಾರೆ.
ಎಸ್ ಐಟಿ ಅಧಿಕಾರಿಗಳು ಮಂಗಳವಾರದ ಮಾದರಿಯಲ್ಲೇ
ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಸಹಿತ ಕಂದಾಯ ಮತ್ತು ಅರಣ್ಯ ಇಲಾಖಾಧಿಕಾರಿಗಳು ದೂರುದಾರನನ್ನು ಕರೆದುಕೊಂಡು ನೇತ್ರಾವತಿ ಸ್ನಾನಘಟ್ಟ ಬಂದಿದ್ದು ಶವ ಹೂತ ಸ್ಥಳದಲ್ಲಿ ಇಂದು ಮಾಡಬೇಕಾದ ಅಗೆತ ಕಾರ್ಯದ ಬಗ್ಗೆ ಮೀಟಿಂಗ್ ನಡೆಸಿದ್ದು ಎರಡನೇ ಸಮಾಧಿಯಲ್ಲಿ ಅಸ್ಥಿಪಂಜರ ಹುಡುಕಾಟಕ್ಕಾಗಿ ಕಾರ್ಮಿಕರ ತಂಡದೊಂದಿಗೆ ಕಾಡಿನೊಳಗೆ ಹೋಗಿದ್ದು ಕಾರ್ಯಾಚರಣೆ ಆರಂಭಗೊಂಡಿದೆ.
ಎಸ್.ಐ.ಟಿ ಕಚೇರಿಗೆ ಐಪಿಎಸ್ ಅನುಚೇತ್, ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್ , ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರು ಕೆ.ಎಮ್.ಸಿ ವೈದ್ಯರ ತಂಡ, ಎಫ್ಎಸ್ಎಲ್ ತಂಡ, ಐ.ಎಸ್.ಡಿ ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆ ಸ್ಥಳದಲ್ಲಿದ್ದಾರೆ.
Post Comment