ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣ:ದೂರುದಾರ ಗುರುತಿಸಿದ 2 ಮತ್ತು 3ನೇ ಸ್ಥಳದಲ್ಲಿ ಪತ್ತೆಯಾಗದ ಕುರುಹು?

ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣ:ದೂರುದಾರ ಗುರುತಿಸಿದ 2 ಮತ್ತು 3ನೇ ಸ್ಥಳದಲ್ಲಿ ಪತ್ತೆಯಾಗದ ಕುರುಹು?

Share
20250730_110315-1024x461 ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣ:ದೂರುದಾರ ಗುರುತಿಸಿದ 2 ಮತ್ತು 3ನೇ ಸ್ಥಳದಲ್ಲಿ ಪತ್ತೆಯಾಗದ ಕುರುಹು?

4ನೇ ನಂಬ್ರದ ಶೋಧ ಕಾರ್ಯದ ಬಗ್ಗೆ ಮೂಡಿದ ಕುತೂಹಲ..!

ಗಮಮೂರನೇ ಸ್ಥಳದ ಶೋಧ ಮುಕ್ತಾಯ ಕಳೇಬರ ಕುರುಹು ಇಲ್ಲ.?

ಬೆಳ್ತಂಗಡಿ : ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣದ
ತನಿಖೆಗೆ ಸಂಬಂಧಿಸಿ ಬೆಳಿಗ್ಗಿನಿಂದ ನಡೆದ ಸಮಾಧಿ ಸ್ಥಳ ಮಹಜರು ಮತ್ತು ಸಮಾಧಿ ಶೋಧ, ಅಗೆತ ಕಾರ್ಯಾಚರಣೆಯಲ್ಲಿ
4 ಗಂಟೆಯವರೆಗೂ ಮಂಗಳವಾರದಂತೆ ಯಾವುದೇ ಕಳೇಬರವು ಪತ್ತೆಯಾಗಿಲ್ಲ ಎಂಬ ಮಾಹಿತಿಯೊಂದು ಬುಧವಾರ ಚಾಲ್ತಿಗೆ ಬಂದಿದೆ.

ಎಸ್ ಐ ಟಿ ಕಾರ್ಯಾಚರಣೆಯ ಮೂರನೇ ದಿನವಾದ
ಇಂದು ಎಸ್ ಐ ಟಿ ಅಧಿಕಾರಿಗಳು ದೂರುದಾರ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಕಲ ಭದ್ರಾತಾ ಅಧಿಕಾರಿಗಳೊಂದಿಗೆ ನೇತ್ರಾವತಿ ಸ್ನಾನಘಟ್ಟ ಪರಿಸರದ ನದಿಯ ಬದಿಯಲ್ಲಿ ಗುರುತು ಮಾಡಿದ ಸ್ಥಳದಲ್ಲಿ ಬಂದು ಎರಡನೇ ಗುರುತಿನ ಸ್ಥಳದಲ್ಲಿ ಸಮಾಧಿ ಅಗೆತ ಆರಂಭಿಸಿದ್ದರು. ಎಸ್ ಐಟಿ ಅಧಿಕಾರಿಗಳು
ಮಂಗಳವಾರದ ಮಾದರಿಯಲ್ಲೇ ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಸಹಿತ ಕಂದಾಯ ಮತ್ತು ಅರಣ್ಯ ಇಲಾಖಾಧಿಕಾರಿಗಳು
ದೂರುದಾರನನ್ನು ಕರೆದುಕೊಂಡು ನೇತ್ರಾವತಿ ಸ್ನಾನಘಟ್ಟಕ್ಕೆ ಬಂದಿದ್ದು
ಶವ ಹೂತ ಸ್ಥಳ ಎಂದು ಗುರುತಿಸಲಾದ ಸ್ಥಳಗಳಲ್ಲಿ
ಶೋಧ ನಡೆಸುವ ಮೊದಲು ಪೂರ್ವ ಮಾತುಕತೆ ನಡಸಿದ ಬಳಿಕ ಎರಡನೇ ಮತ್ತು ಮೂರನೇ ಸಮಾಧಿ ಸ್ಥಳದಲ್ಲಿ ಶೋಧ ಕಾರ್ಯ ಆರಂಭಿಸಿದ್ದರು. ಸಮಾಧಿ ಸ್ಥಳವೆಂದು ಗುರುತಿಸಲಾದ
2 ಮತ್ತು 3 ನಂಬ್ರದ ಸಮಾಧಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ
ಆದರೆ ಸಂಜೆ 4 ಗಂಟೆಯವರೆಗೂ ಯಾವುದೇ ಕಳೇಬರ ಸಿಗದ ಕಾರಣ ಇದೀಗ 4 ನೇ ಸಮಾಧಿ ಅಗೆತ ಆರಂಭಿಸಿದ್ದಾರೆ.
1ರಿಂದ 3ರವರೆಗಿನ ಸಮಾಧಿಗಳಲ್ಲಿ ಯಾವುದೇ ಕುರುಹು ಸಿಗಲಿಲ್ಲ ಎಂದು ಹೇಳಲಾಗುತ್ತಿದ್ದು ಇದೀಗ 4ನೇ ಸಮಾಧಿಯ ಶೋಧ ಕಾರ್ಯದ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಇದೀಗ 4ನೇ ಕಾರ್ಯಾಚರಣೆ ಸ್ಥಳಕ್ಕೆ ಎಸ್ ಐಟಿ ಮುಖ್ಯಸ್ಥ ಡಾ.ಪ್ರಣವ್ ಕುಮಾರ್ ಮೊಹಾಂತಿ ಹಾಗೂ ಸೈಮನ್ ಭೇಟಿ ನೀಡಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!