ಧರ್ಮಸ್ಥಳ ಸಮೂಹ ದಫನ ಪ್ರಕರಣ : ಸ್ಥಳ ಸಂಖ್ಯೆ 7ರಲ್ಲಿ ಪತ್ತೆಯಾಗದ ಕಳೇಬರ!



ಬೆಳ್ತಂಗಡಿ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮತ್ತು ದಿನದಿಂದ ದಿನಕ್ಕೆ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ಎಸ್ ಐ ಟಿ ತನಿಖೆಯು ಮುಂದುವರಿದಿದ್ದು ದೂರುದಾರ ಗುರುತಿಸಿದ ಸಮಾಧಿ ಸ್ಥಳ ಸಂಖ್ಯೆ 8ರಲ್ಲಿ ಕಳೇಬರ ಶೋಧ ಕಾರ್ಯಾಚರಣೆಯು ಇದೀಗ ಆರಂಭಗೊಂಡಿದೆ.
ಗುರುವಾರ 6ನೇ ಸಮಾಧಿಯನ್ನು ಗುರುವಾರ ಅಗೆಯಲಾಗಿದ್ದು ಕಳೇಬರ ಪತ್ತೆಯಾಗಿತ್ತು.
ಇಂದು ಬೆಳಿಗ್ಗೆ ಆರಂಭಿಸಿದ ಸ್ಥಳ ಸಂಖ್ಯೆ 7ರಲ್ಲಿ ಮಧ್ಯಾಹ್ನವರೆಗೂ ಹುಡುಕಾಡಿದರೂ ಯಾವುದೇ ಅಸ್ಥಿಪಂಜರದ ಕುರುಹುಗಳು ಪತ್ತೆಯಾಗಿಲ್ಲ. ಇದೀಗ ಧರ್ಮಸ್ಥಳ ನೇತ್ರಾವತಿ ಸೇತುವೆಯ ಬಳಿ ನದಿಯ ತಟದಲ್ಲಿ ಗುರುತಿಸಲಾದ ಸ್ಥಳ ಸಂಖ್ಯೆ 8ರಲ್ಲಿ ಅಗೆತ ಮತ್ತು ಶೋಧ ಆರಂಭಗೊಂಡಿದ್ದು ಮಿನಿ ಹಿಟಾಚಿ ಮತ್ತು ಸುಮಾರು 10-15 ಮಂದಿ ಕಾರ್ಮಿಕರ ಮೂಲಕ ಅಸ್ಥಿಪಂಜರ ಶೋಧ ಕಾರ್ಯ ಸಕಲ ಭದ್ರತೆ, ಸುರಕ್ಷತಾ ಕ್ರಮಗಳೊಂದಿಗೆ
ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಎಸ್ ಐ ಟಿ ಅದಿಕಾರಿಗಳ ಜೊತೆ ಎಂದಿನಂತೆ ತಜ್ಞ ವೈದ್ಯರು, ಕಂದಾಯ , ಅರಣ್ಯ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಮಿನಿ ಹಿಟಾಚಿ ಮತ್ತು ಸುಮಾರು 15 ಕಾರ್ಮಿಕರನ್ನು ಶಿಫ್ಟ್ ಪ್ರಕಾರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.















Post Comment