ಧರ್ಮಸ್ಥಳ ಸಮೂಹ ದಫನ ಪ್ರಕರಣ-5ನೇ ದಿನ : ಸಮಾಧಿ ಸ್ಥಳ ಸಂಖ್ಯೆ 7ರಲ್ಲಿ ಶೋಧ ಕಾರ್ಯಾಚರಣೆ ಆರಂಭ

ಬೆಳ್ತಂಗಡಿ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮತ್ತು ದಿನದಿಂದ ದಿನಕ್ಕೆ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ಎಸ್ ಐ ಟಿ ತನಿಖೆಯು ಮುಂದುವರಿದಿದ್ದು ದೂರುದಾರ ಗುರುತಿಸಿದ ಸಮಾಧಿ ಸ್ಥಳ ಸಂಖ್ಯೆ 7ರಲ್ಲಿ ಕಳೇಬರ ಶೋಧ ಕಾರ್ಯಾಚರಣೆಯು ಇದೀಗ ಆರಂಭಗೊಂಡಿದೆ.
ಗುರುವಾರ 6ನೇ ಸಮಾಧಿಯನ್ನು ಗುರುವಾರ ಅಗೆಯಲಾಗಿದ್ದು ಕಳೇಬರ ಪತ್ತೆಯಾಗಿತ್ತು.
ನೇತ್ರಾವತಿ ಸೇತುವೆಯ ಬಳಿ ನದಿಯ ತಟದಲ್ಲಿ ಮೊದಲ ದಿನ ಗುರುತಿಸಲಾದ ಸಮಾಧಿ ಸ್ಥಳ ಸಂಖ್ಯೆ 7ರಲ್ಲಿ ಮಿನಿ ಹಿಟಾಚಿ ಮತ್ತು ಸುಮಾರು 10 ಮಂದಿ ಕಾರ್ಮಿಕರ ಮೂಲಕ ಅಸ್ಥಿಪಂಜರ ಶೋಧ ಕಾರ್ಯ ಸಕಲ ಭದ್ರತೆ, ಸುರಕ್ಷತಾ ಕ್ರಮಗಳೊಂದಿಗೆ
ಆರಂಭಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್ ಐ ಟಿ ಅದಿಕಾರಿಗಳ ಜೊತೆ
ಎಂದಿನಂತೆ ತಜ್ಞ ವೈದ್ಯರು, ಕಂದಾಯ , ಅರಣ್ಯ ಇಲಾಖೆಗಳ
ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಮಿನಿ ಹಿಟಾಚಿ ಮತ್ತು ಸುಮಾರು 15 ಕಾರ್ಮಿಕರನ್ನು ಶಿಫ್ಟ್ ಪ್ರಕಾರ ಶೋಧ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.














Post Comment