ಧರ್ಮಸ್ಥಳ ಸರಣಿ ದಫನ ಪ್ರಕರಣ : ಹಿಂದೆ ಕಾರ್ಯಾಚರಣೆ ನಡೆಸಿದ ಸ್ಥಳದಲ್ಲಿ ಮರು ಶೋಧ ಮಹಿಳೆ ಕಳೇಬರ, ಕೆಂಪು ಸೀರೆ ಪತ್ತೆ..? ಸಮಾಧಿ ಸ್ಥಳ ಸಂಖ್ಯೆ: 11ರಲ್ಲಿ ಇದುವರೆಗೂ ನಡೆಯದ ಶೋಧ ಕಾರ್ಯಾಚರಣೆ..!!

ಧರ್ಮಸ್ಥಳ ಸರಣಿ ದಫನ ಪ್ರಕರಣ : ಹಿಂದೆ ಕಾರ್ಯಾಚರಣೆ ನಡೆಸಿದ ಸ್ಥಳದಲ್ಲಿ ಮರು ಶೋಧ ಮಹಿಳೆ ಕಳೇಬರ, ಕೆಂಪು ಸೀರೆ ಪತ್ತೆ..? ಸಮಾಧಿ ಸ್ಥಳ ಸಂಖ್ಯೆ: 11ರಲ್ಲಿ ಇದುವರೆಗೂ ನಡೆಯದ ಶೋಧ ಕಾರ್ಯಾಚರಣೆ..!!

Share
IMG_20250804_114539-1 ಧರ್ಮಸ್ಥಳ ಸರಣಿ ದಫನ ಪ್ರಕರಣ :     ಹಿಂದೆ ಕಾರ್ಯಾಚರಣೆ  ನಡೆಸಿದ ಸ್ಥಳದಲ್ಲಿ ಮರು ಶೋಧ ಮಹಿಳೆ ಕಳೇಬರ, ಕೆಂಪು ಸೀರೆ ಪತ್ತೆ..?                        ಸಮಾಧಿ ಸ್ಥಳ ಸಂಖ್ಯೆ: 11ರಲ್ಲಿ ಇದುವರೆಗೂ ನಡೆಯದ ಶೋಧ ಕಾರ್ಯಾಚರಣೆ..!!

ಬೆಳ್ತಂಗಡಿ : ಸೋಮವಾರ
ಭೀಮಾ (ದೂರುದಾರ) SIT ತಂಡಕ್ಕೆ ತನ್ನ ಮನವಿ ಮಾಡಿಕೊಂಡಂತೆ
ಮೊದಲನೇ ದಿನ ಆತ ತೋರಿಸಿದ ಜಾಗಗಳಿಗೆ ಟೇಪ್ ಹಾಕಿದ ಮೇಲೆ, ಆ ಟೇಪ್ ನ ಸುತ್ತಳತೆಗೆ ಮಾತ್ರ ಉತ್ಖನನವನ್ನು ಸೀಮಿತಗೊಳಿಸದೆ ಟೇಪ್ ನ ಸುತ್ತಮುತ್ತಲಿನ ಜಾಗದಲ್ಲೂ ಆತನ ಜೊತೆಗೆ ಉತ್ಖನನ ತಂಡಹೋಗಿ
ಶೋಧ ಕಾರ್ಯಾಚರಣೆ ಆರಂಭಿಸಿದ್ದು ಮಹಿಳೆಯ ಕಳೇಬರ , ಕೆಂಪು ಬಣ್ಣದ ಸೀರೆ ಪತ್ತೆಯಾಗಿದ್ದು ಇಷ್ಟು ದಿನಗಳ ಶೋಧ ಕಾರ್ಯಾಚರಣೆಗಳ ಪೈಕಿ
ಇದು ಮಹತ್ವದ ಪುರಾವೆಗಳಾಗಿ ಪ್ರಕರಣವು ರೋಚಕ ತಿರುವು ಪಡೆಯುವ ಸಾಧ್ಯತೆಗಳಿವೆ.

ಬೆಳ್ತಂಗಡಿ : ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ತನಿಖೆಯ ಪ್ರಮುಖ ಭಾಗವಾಗಿರುವ ದೂರುದಾರ ಶವಗಳನ್ನು‌ ಹೂತ ಸ್ಥಳವೆಂದು ಗುರುತಿಸಲಾದ ಸಂಖ್ಯೆ: 11ರಲ್ಲಿ ಸೋಮವಾರ ಸುಮಾರು 11 ಗಂಟೆ ಹೊತ್ತಿಗೆ
ಶೋಧ ಕಾರ್ಯಾಚರಣೆ ಆರಂಭಗೊಂಡಿದೆ.
11ನೇ ಸ್ಥಳಕ್ಕೆ ಎಸ್ ಐ ಟಿ ಅಧಿಕಾರಿಗಳು ದೂರುದಾರನನ್ನು ಕರೆದುಕೊಂಡು ಹೋಗಿದ್ದರೂ
ಆ ಸ್ಥಳದಲ್ಲಿ‌ ಶೋಧ ಕಾರ್ಯ ನಡೆಸದೆ ನೇರ ಇಡೀ‌ ತಂಡ ಅಕ್ಕಪಕ್ಕದಲ್ಲಿರುವ 11ಮತ್ತು 12ಸಂಖ್ಯೆಯ ಸ್ಥಳಗಳನ್ನು ಕೈಬಿಟ್ಟು ಕಾಡಿನೊಳಗೆ ಹೋಗಿದ್ದು
ಇದುವರೆಗೂ ಊಟಕ್ಕೂ ಬರದೆ ಕಾರ್ಯಾಚರಣೆಯಲ್ಲಿದ್ದಾರೆ.

ಎಂದಿನಂತೆ ಇತರ ಇಲಾಖಾಧಿಕಾರಿಗಳು ಸಿಬ್ಬಂದಿಗಳ ಜೊತೆ ಆಗಮಿಸಿ
ಕಾರ್ಯಾಚರಣೆ ಆರಂಭಿಸಲಿದೆ ಎಂದು ನಂಬಲಾಗಿದೆ.

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಿಂದ ಸುಮಾರು 150 ಮೀಟರ್ ದೂರದಲ್ಲಿ ಹೆದ್ದಾರಿಯ ಬದಿಯಲ್ಲಿ ಸಾಲಾಗಿ ಗುರುತಿಸಲಾದ ಸ್ಥಳಗಳ ಪೈಕಿ ಸ್ಥಳ ಸಂಖ್ಯೆ 9-10ರಲ್ಲಿ ಶನಿವಾರ ಶೋಧ ನಡೆದಿತ್ತು.
ಆದರೆ ಶನಿವಾರ ಅಗೆದ ಸಮಾಧಿಯಲ್ಲಿ ಯಾವುದೇ ಕುರುಹುಗಳು‌ ಪತ್ತೆಯಾಗಿರಲಿಲ್ಲ‌.

ಆದರೆ ಸೋಮವಾರ -11ರಲ್ಲಿ ಶನಿವಾರ ಅಗೆತ ಮತ್ತು ಶೋಧ ಕಾರ್ಯಾಚರಣೆಗೆಂದು ಬಂದಿದ್ದ
ತಂಡ ಎಸ್ ಐ ಟಿ ತಂಡ ಸ್ಥಳ ಸಂಖ್ಯೆ 11ರಲ್ಲಿ ಯಾವುದೇ
ಆರಂಭಿಸದೆ ಕಾಡಿನೊಳಗೆ ಹೋಗಿರುವ ತಂಡ 4 ಗಂಟೆಯಾದರೂ ಕಾಡಿನಿಂದ ಹೊರಗೆ ಬಂದಿಲ್ಲ, ಊಟಕ್ಕೂ ಬಂದಿಲ್ಲ, ಕಾಡಿಗೆ ಯಾವುದೇ ಪಾರ್ಸೆಲ್ ಊಟವನ್ನೂ ತರಿಸಿಕೊಂಡಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಇಂದು ಯಾವುದೋ ಮಹತ್ವದ ಬೆಳವಣಿಗೆಯಾಗಿದೆ ಅಥವಾ ಈ ಹಿಂದೆ ದೂರುದಾರ ಗುರುತಿಸದ ಸಮಾಧಿಯಲ್ಲಿ ಕಳೇಬರ ಪತ್ತೆಯಾಗುದೆಯೇ ಎಂಬ ಕುತೂಹಲವನ್ನು ಮೂಡಿಸಿದೆ.
ಒಟ್ಟಿನಲ್ಲಿ ಸೋಮವಾರ 4 ಗಂಟೆಗಳವರೆಗೂ ಎಸ್ ಐ ಟಿ ಕಾರ್ಯಾಚರಣೆ
ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಎಸ್ ಐ ಟಿ ಅಧಿಕಾರಿಗಳು , ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಅರಣ್ಯ ಇಲಾಖಾಧಿಕಾರಿಗಳು ಮತ್ತಿತರ ಇಲಾಖಾಧಿಕಾರಿಗಳು ಕಾರ್ಯಾಚರಣೆ ಸ್ಥಳದಲ್ಲಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!