ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣ : ಹೊಸ ಸ್ಪಾಟ್ – ನಂ: 15ರಲ್ಲಿ ಕಳೇಬರ ಶೋಧ ಆರಂಭ

ಬೊಳಿಯಾರ್ ಬಳಿ ದುರ್ಗಮ ಅರಣ್ಯದೊಳಗೆ ಎಸ್ ಐ ಟಿ ಪ್ರವೇಶ
ಬೆಳ್ತಂಗಡಿ : ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣದ ಸಮಾಧಿ ಶೋಧ ಕಾರ್ಯಚರಣೆಯು ಶುಕ್ರವಾರ ಮತ್ತೆ ಮುಂದುವರಿದಿದ್ದು ದೂರುದಾರ ಮತ್ತು ಇಡೀ ಎಸ್ ಐ ಟಿ ತಂಡ ಇತರ ಇಲಾಖಾಧಿಕಾರಿಗಳು ಬೆಳ್ತಂಗಡಿ ಎಸ್ ಐ ಟಿ ಠಾಣೆಯಿಂದ ಧರ್ಮಸ್ಥಳಕ್ಕೆ ಬಂದು ಹೊಸ ಸ್ಪಾಟ್ – ನಂ: 15ರಲ್ಲಿ ನಿಗೂಢ ಕಳೇಬರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಎಸ್.ಐ.ಟಿ ತಂಡ ಶುಕ್ರವಾರ ಹೊಸ ಸ್ಥಳದಲ್ಲಿ ಪರಿಶೀಲನೆ ಆರಂಭಿಸಿದೆ. ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಸಮೀಪಕ್ಕೆ ಆ.8 ರಂದು ಸಾಕ್ಷಿ ದೂರುದಾರನೊಂದಿಗೆ ಎಸ್.ಐ.ಟಿ ತಂಡ ಆಗಮಿಸಿದೆ.ಕಳೆದ ಎರಡು ವಾರಗಳಿಂದ ನೇತ್ರಾವತಿ ಸ್ನಾನಘಟ್ಟದ ಸಮೀಪ ದೂರುದಾರ ತೋರಿಸಿದ ಜಾಗದಲ್ಲಿ ಅಗೆಯುವ ಪ್ರಕ್ರಿಯೆ ನಡೆಸಲಾಗಿತ್ತು.
ದೂರುದಾರನ ಮನವಿಯಂತೆ ಇದೀಗ ಹೊಸ ಸ್ಥಳಕ್ಕೆ ಸಾಕ್ಷಿ ದೂರುದಾರನನ್ನು ಕರೆತಂದಿದ್ದಾರೆ. ಆದರೆ ಸಾಕ್ಷಿ ದೂರುದಾರ
ಇಂದಿನ ಕಾರ್ಯಾಚರಣೆಯಲ್ಲಿ ಎಷ್ಟು ಸಮಾಧಿ ಸ್ಥಳಗಳನ್ನು ಗುರುತಿಸುತ್ತಾನೆ ಎಂಬ ಬಗ್ಗೆ ಕುತೂಹಲ ಕುತೂಹಲ ಮೂಡಿದೆ.















Post Comment