ಧರ್ಮಸ್ಥಳ ಯೂಟ್ಯೂಬರ್ಸ್ ಮೇಲೆ ಗೂಂಡಾಗಿರಿ : ದಲಿತ ಸಂಘರ್ಷ ಸಮಿತಿ ಮುಖಂಡರ ನಿಯೋಗ ಆಸ್ಪತ್ರೆಗೆ ಭೇಟಿ


ಆರೋಪಿಗಳ ವಿರುದ್ಧ ಅಟ್ರಾಸಿಟಿ ಪ್ರಕರಣದಡಿ ಬಂಧಿಸುವಂತೆ ಒತ್ತಾಯ
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಹಲವಾರು ಶವಗಳ ಕಾನೂನುಬಾಹಿರ ದಫನ ಪ್ರಕರಣದ ಎಸ್ ಐ ಟಿ ತನಿಖೆಯ ವರದಿ ಮಾಡುತ್ತಿದ್ದ ಸಂದರ್ಭ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಗೊೂೂಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಯೂಟ್ಯೂಬರ್ ಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳು ಮತ್ತು ಮೈಸೂರು ವಿಭಾಗೀಯ ಪದಾಧಿಕಾರಿಗಳ ನಿಯೋಗವು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೃತಿಗೆಡದಂತಿ ಧೈರ್ಯ ತುಂಬಿದೆ. ತನಿಖೆಯ ಹಾದಿ ತಪ್ಪಿಸುವ ದುರುದುದ್ದೇಶದಿಂದ ಸ್ಥಳೀಯ ಕೆಲವು ಗೂಂಡಾ ಪ್ರವೃತ್ತಿಯ ಕಿಡಿಗೇಡಿಗಳು ಮಾಧ್ಯಮ ವರದಿಗಾರರಾಗಿ ಬಂದಿರುವ ಯೂಟ್ಯೂಬ್ ಚಾನೆಲ್ ವರದಿಗಾರರ ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣದ ದಲಿತ ಸಮುದಾಯದ ಯೂಟ್ಯೂಬರ್ ಅಭಿಷೇಕ್ ಸಹಿತ ನಾಲ್ಕು ಮಂದಿ ಯೂಟ್ಯೂಬರ್ ಗಳಿಗೆ ಮಾರಣಾಂತಿ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ. ಹಾಗೂ ಕ್ಯಾಮೆರಾ, ವಾಹನ ಇನ್ನಿತರ ಸಲಕರಣೆಗಳನ್ನೂ ಧ್ವಂಸ ಮಾಡಲಾಗಿದೆ.
ವರದಿಗಾಗಿ ಬಂದಿರುವ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡುವ ಪೂರ್ವ ಯೋಜಿತ ಕಿಡಿಗೇಡಿಗಳ ತಂಡವು ಧರ್ಮಸ್ಥಳದ ಪ್ರದೇಶದಲ್ಲಿ ಮೊದಲೇ ಜಮಾವಣೆಗೊಂಡು
ಬಡಪಾಯಿ ದಲಿತ ವ್ಯಕ್ತಿಯನ್ನು ಕೇಂದ್ರೀಕರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಪೂರ್ವಯೋಜಿತವಾದ ಹತಾಶೆಯ ಕೃತ್ಯವಾಗಿದೆ , ಸಂವಿಧಾನದ ನಾಲ್ಕನೇಯ ಅಂಗವೆಂದೇ ಕರೆಯಲ್ಪಡುವ ಮಾಧ್ಯಮ ಪ್ರತಿನಿಧಿಗಳ ಮೇಲೆ ಸಮಾಜಘಾತುಕ ಶಕ್ತಿಗಳು ಹಲ್ಲೆ ಮಾಡಿರುವ ಘಟನೆಯನ್ನು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ನಿಯೋಗ ತೀವ್ರವಾದ ಖಂಡನೆ ವ್ಯಕ್ತಪಡಿಸಿದ್ದು ಕಿಡಿಗೇಡಿಗಳ ಗುಂಪು ಹಲ್ಲೆಯ ಘಟನೆಯಲ್ಲಿ ಗಾಯಗೊಂಡ ದಲಿತ ಸಮುದಾಯದ ಯೂಟ್ಯೂಬರ್ ಅಭಿಷೇಕ್ ಮತ್ತು ಗಲಭೆಯಲ್ಲಿ ಗಾಯಗೊಂಡ ಇತರೆ ಮಾಧ್ಯಮದವರ ಆರೋಗ್ಯ ವಿಚಾರಿಸಿ ಅವರಿಗೆ ನ್ಯಾಯ ಮತ್ತು ರಕ್ಷಣೆಗಾಗಿ ಒತ್ತಾಯಿ ಸಿದೆ, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೂಟ್ಯೂಬರ್ಸ್ ಗಳನ್ನು
ಭೇಟಿ ಮಾಡಿ ಘಟನೆಯ ವಿವರಗಳನ್ನು ಪಡೆದು
ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳನ್ನು ಸಂಪರ್ಕ ಮಾಡಿ ಘಟನೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿಗಳು ತೀರಾ ಅಸ್ವಸ್ಥಗೊಂಡಿದ್ದ ಸಮಯದಲ್ಲೇ ಪೋಲಿಸರು ವರದಿ ಪಡೆದು ಕೊಂಡು ಪ್ರಕರಣ ದಾಖಲಿಸಿರುವ ಪರಿಣಾಮ ಪ್ರಕರಣದ ತೀವ್ರತೆ ಕಳೆದುಕೊಂಡಿದ್ದು ಆರೋಪಿಗಳು ಬಹುಬೇಗನೆ ಜಾಮೀನಿನ ಮೇಲೆ ಹೊರಬರುವ ಸಾಧ್ಯತೆ ಇದ್ದು ಗಾಯಾಳು ದೂರುದಾರರ ಮರು ಹೇಳಿಕೆ ಮಾಡಿ ದಲಿತ ದೌರ್ಜನ್ಯ ಪ್ರಕರಣ ಮತ್ತು ಸಾಕ್ಷಿನಾಶ ,ಮತ್ತು ದರೋಡೆ ಪ್ರಕರಣ ಕೇಸು ದಾಖಲಿಸುವಂತೆ ಪೋಲಿಸ್ ಇಲಾಖೆಯ ಅಧಿಕಾರಿಗಳನ್ನು ದಸಂಸ ಒತ್ತಾಯಿಸಿತು.
ಈ ಬಗ್ಗೆ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಾಗುವುದು ಎಂದು ದಸಂಸ ನಾಯಕರು ತಿಳಿಸಿದರು.
ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುವ ಮತ್ತು ಅದರ ಅಂಗವೆನಿಸಿಕೊಂಡಿರುವ ಮಾಧ್ಯಮದ ಮೇಲೆ ಸವಾರಿ ಮಾಡುವುದೆಂದರೆ ಸಂವಿಧಾನದ ಮೇಲಿನ ದಾಳಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದು ಧರ್ಮಸ್ಥಳದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಎಲ್ಲಾ ಆರೋಪಿಗಳನ್ನು ದಲಿತ ದೌರ್ಜನ್ಯ ವಿರೋಧಿ ಕಾಯ್ದೆಯಡಿ ಕೂಡಲೇ ಬಂಧಿಸಬೇಕೆಂದು ದಸಂಸ ಅಂಬೇಡ್ಕರ್ ವಾದ ಮುಖಂಡರು ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾದ ದಲಿತ ಸಂಘರ್ಷ ಸಮಿತಿಯ ನಿಯೋಗದಲ್ಲಿ ಬೆಳ್ತಂಗಡಿಯ ಪ್ರಮುಖರಾದ ಶೇಖರ್ ಕುಕ್ಕೇಡಿ,
ರಮೇಶ್ ಆರ್, ಬಿ.ಕೆ.ವಸಂತ್ ಬೆಳ್ತಂಗಡಿ, ವೆಂಕಣ್ಣ ಕೊಯ್ಯೂರು,
ನೇಮಿರಾಜ್ ಕಿಲ್ಲೂರು, ಶ್ರೀಧರ್ ಎಸ್ ಕಳೆಂಜ, ಶಂಕರ್ ಮಾಲಾಡಿ, ಪ್ರಭಾಕರ್ ಶಾಂತಿಕೋಡಿ, ಹರೀಶ್ ಲಾಯಿಲ,
ಕೂಸ ಅಳದಂಗಡಿ, ಸುಂದರ ನಾಲ್ಕೂರು, ಪುಷ್ಪರಾಜ್ ಶಿರ್ಲಾಲ್.
ಸಂದೀಪ್ ಹೊಸಪಟ್ನ, ಶೇಖರ್ ಮಾಲಾಡಿ, ರಮೇಶ್ ಗಾಂಧಿನಗರ. ಮತ್ತಿತರ ಪದಾದಿಕಾರಿಗಳು ಇದ್ದರು.















Post Comment