ಧರ್ಮಸ್ಥಳದಲ್ಲಿ ನಾಲ್ವರು ಯೂಟ್ಯೂಬರ್ಸ್ ಮೇಲೆ ಗೂಂಡಾಗಿರಿ : ಓರ್ವ ಆರೋಪಿ ಬಂಧನ


ಬೆಳ್ತಂಗಡಿ : ಧರ್ಮಸ್ಥಳ ಪಾಂಗಾಳ ತಿರುವು ರಸ್ತೆಯ ಬಳಿ ನಾಲ್ವರು ಯೂಟ್ಯೂಬರ್ಸ್ ಮೇಲೆ ಕಿಡಿಗೇಡಿಗಳ ತಂಡವೊಂದು ಹಲ್ಲೆಗೈದು ಅವರ ಕ್ಯಾಮೆರಾ ಮತ್ತು ವಾಹನಗಳಿಗೆ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿ ಜೀಪು ಚಾಲಕ ಸೋಮನಾಥ ಸಫಲ್ಯ (48) ಎಂಬಾತನನ್ನು ಧರ್ಮಸ್ಥಳ ಪೊಲಿಸರು ಗುರುವಾರ ಬಂಧಿಸಿದ್ದಾರೆ.
ಮಂಗಳೂರಿನ ‘ಕುಡ್ಲ ರ‍್ಯಾಂಪೇಜ್’ ಎಂಬ ಹೆಸರಿನ ಯೂಟ್ಯೂಬರ್ ಅಜಯ್ ಅಂಚನ್ ಮತ್ತು ಇತರ ಮೂರು ಮಂದಿ ಯೂಟ್ಯೂಬರ್ಸ್ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕ್ಯಾಮೆರಾ ಪುಡಿಗೈದು, ವಾಹನಗಳಿಗೆ ಹಾನಿಗೊಳಿಸಿತ್ತು.

ಅಜಯ್ ಅಂಚನ್ ಅವರ ಜೊತೆಗೆ, ‘ಯುನೈಟೆಡ್ ಮೀಡಿಯಾದ ಅಭಿಷೇಕ್, ,ಸಂಚಾರಿ ಸ್ಟುಡಿಯೋ’ದ ವಿಜಯ್ ಮತ್ತು ‘ಕುಡ್ಲಾ ರಾಂಪೇಜ್’ ನ ಕ್ಯಾಮೆರಾ ಪರ್ಸನ್ ಮೇಲೆ ಹಲ್ಲೆ ನಡೆದಿತ್ತು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ಕಾರ್ಯಾಚರಣೆಯ ವರದಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ದಾಳಿ ನಡೆಸಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಯೂಟ್ಯೂಬರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಬಾತನನ್ನು ಬಂಧಿಸಿದ್ದು ಬಂಧಿತ ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.












Post Comment