ಮೂಡಬಿದ್ರೆ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯ ವ್ಯಕ್ತಿ ಸಹಿತ ಇಬ್ಬರು ವಶಕ್ಕೆ- ಮಹಿಳೆ ರಕ್ಷಣೆ

ಮೂಡಬಿದ್ರೆ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯ ವ್ಯಕ್ತಿ ಸಹಿತ ಇಬ್ಬರು ವಶಕ್ಕೆ- ಮಹಿಳೆ ರಕ್ಷಣೆ

Share
IMG_20250828_112236 ಮೂಡಬಿದ್ರೆ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯ ವ್ಯಕ್ತಿ ಸಹಿತ ಇಬ್ಬರು ವಶಕ್ಕೆ-   ಮಹಿಳೆ ರಕ್ಷಣೆ

ಬೆಳ್ತಂಗಡಿ : ಮೂಡುಬಿದಿರೆ ನಗರದ ಪ್ರತಿಷ್ಠಿತ ಖಾಸಗಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಮೂಡುಬಿದಿರೆ ಪೊಲೀಸರು ಬೆಳ್ತಂಗಡಿಯ ವ್ಯಕ್ತಿಯ ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ನಾರಾವಿ ನಿವಾಸಿ ಭರತ್ ಜೈನ್ಹಾ ಗೂ ಮೂಡುಬಿದಿರೆ ಸ್ವರಾಜ್ಯ ಮೈದಾನ ಸಮೀಪದ ನಿವಾಸಿ ರಾಜೇಶ್ ಬೋವಿ ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಲಿಯಾದ ಓರ್ವ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಮೂಡಬಿದಿರೆ ಮಾರ್ಪಾಡಿ ಗ್ರಾಮದ ಆಳ್ವಾಸ್ ಆಸ್ಪತ್ರೆ ಕಡೆಗೆ ಹೋಗುವ ರಸ್ತೆಯಲ್ಲಿರುವ ಮಹಡಿ ಕಟ್ಟಡದಲ್ಲಿರುವ ರೂಮ್ ಪಡೆದ ವ್ಯಕ್ತಿಗಳಿಂದ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್ ಇನ್ಸೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸ್ ತಂಡ
ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.

Post Comment

ಟ್ರೆಂಡಿಂಗ್‌

error: Content is protected !!