ಧರ್ಮಸ್ಥಳ ಅನನ್ಯ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಕಟ್ಟು ಕಥೆಯೇ?

ಬೆಳ್ತಂಗಡಿ : ಬುರುಡೆ ಪ್ರಕರಣದ ಪ್ರಮುಖ ದೂರುದಾರ ಚಿನ್ನಯ್ಯ ವಕೀಲರ ಮೂಲಕ ದೂರುಕೊಟ್ಟ ಬೆನ್ನಲ್ಲೇ ವಕೀಲರ ಮೂಲಕ ಧರ್ಮಸ್ಥಳದಿಂದ ಮಗಳು ನಾಪತ್ತೆಯಾಗಿದ್ದಾಳೆಂದು ಮಹತ್ವದ ದೂರು ನೀಡಿ ತೀವ್ರ ಕುತೂಹಲ ಕೆರಳಿಸಿ ರಾಜ್ಯದ ಗಮನ ಸೆಳೆದಿದ್ದರು.
ಇದೀಗ ಸುಜಾತ ಭಟ್ ದೂರಿನ ಅನನ್ಯ ಭಟ್ ನಾಪತ್ತೆ ಪ್ರಕರಣದ ಹಿಂದಿನ ಸತ್ಯಾಸತ್ಯತೆಯನ್ನು ಎಸ್.ಐ.ಟಿ. ಅಧಿಕಾರಿಗಳು ಸರಣಿ ವಿಚಾರಣೆಯ ಮೂಲಕ ಬಯಲುಗೊಳಿಸಿದ್ದು ಈ ಪ್ರಕರಣವೇ ಫೇಕ್ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಎಸ್.ಐ.ಟಿ. ವಿಚಾರಣೆಯ ವೇಳೆ ಇದೊಂದು ಸುಳ್ಳು ಪ್ರಕರಣ ಎಂದು ಸುಜಾತ ಭಟ್ ತಪ್ಪೊಪ್ಪಿಕೊಂಡಿದ್ದು ಅನನ್ಯ ಭಟ್ ಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಒಪ್ಪಿಸಲು ವಿಫಲರಾದ ಹಿನ್ನೆಲೆಯಲ್ಲಿ ಸುಜಾತ ಭಟ್ ಅವರನ್ನು ಎಸ್.ಐ.ಟಿ ಅಧಿಕಾರಿಗಳು ಯಾವುದೇ ಕ್ಷಣದಲ್ಲೂ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಆದರೆ ಎಸ್ ಐ ಟಿ ಅಧಿಕಾರಿಗಳು ಸುಜಾತ ಭಟ್ ಪ್ರಕರಣದಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.














Post Comment