ಧರ್ಮಸ್ಥಳ : ಉಲ್ಟಾ ತಿರುಗಿದ ತಲೆ ಬುರುಡೆ ಪ್ರಕರಣ!

ಬೆಳ್ತಂಗಡಿ : ಒಂದು ತಿಂಗಳಿನಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಬುರುಡೆ ಪ್ರಕರಣವು ಇದೀಗ ಮತ್ತೊಂದು ಸ್ಫೋಟಕ ತಿರುವುಪಡೆದುಕೊಂಡಿದ್ದು ಸೌಜನ್ಯ ಮಾವ ವಿಠಲ ಗೌಡ
ನೇತ್ರಾವತಿ ಸ್ನಾನಘಟ್ಟ ಬಳಿಯ ಬಂಗ್ಲೆಗುಡ್ಡೆ ಕಾಡಿನಿಂದ ತಲೆ ಬುರುಡೆ ತಂದಿರುವ ಸಂಗತಿ ಬಯಲಾಗಿದೆ.
ಬುರುಡೆ ರಹಸ್ಯ ಬಯಲಾದ ಬೆನ್ನಲ್ಲೇ ಎಸ್ ಐ ಟಿ ಅಧಿಕಾರಿಗಳು ಸೌಜನ್ಯ ಮಾವ ವಿಠಲ ಗೌಡನನ್ನು ಬುರುಡೆ ತೆಗೆದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು ಕಾಡಿನಿಂದ ಗಿರೀಶ್ ಮಟ್ಟಣ್ಣವರ್ ಗೆ ನೀಡಿದ್ದು ಪಾಂಗಳದ ಸೌಜನ್ಯ ಮಾವ ವಿಠಲ್ ಗೌಡ ಎಂದು ಎಸ್.ಐ.ಟಿ ವಿಚಾರಣೆಯಲ್ಲಿ ಬಯಲಾಗಿದೆ.
ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆಯನ್ನು ತಂದು ಗಿರೀಶ್ ಮಟ್ಟಣ್ಣನವರ್ ಗೆ ನೀಡಿದ್ದು ಅದನ್ನು ಜಯಂತ್.ಟಿ ಮೂಲಕ ಆರೋಪಿ ಚಿನ್ನಯ್ಯನಿಗೆ ಹಸ್ತಾಂತರಿಸಿರುವುದು ಎಸ್.ಐ.ಟಿ ತನಿಖೆಯಲ್ಲಿ ಬಯಲಾಗಿದೆ. ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ಸೆ.6 ರಂದು ಸಂಜೆ ಬುರುಡೆ ತೆಗೆದುಕೊಂಡು ಬಂದ ಸೌಜನ್ಯ ಮಾವ ವಿಠಲ್ ಗೌಡನನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದು ಮುಂದಿನ ತನಿಖೆ ಇನ್ನಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ನಾಗರಿಕ ವಲಯದಿಂದ ಕೇಳಿ ಬರುತ್ತಿದೆ.














Post Comment