ಎಸ್ ಐ ಟಿಗೆ ಪ್ರಬಲ ಶಕ್ತಿ ತುಂಬಲು ಶ್ರದ್ಧಾ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮಹೇಶ್ ಶೆಟ್ಟಿ ತಿಮರೋಡಿ ಕರೆ

ಬೆಳ್ತಂಗಡಿ : ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣದ ಎಸ್ ಐ ಟಿಯ ಸತ್ಯಪರ ತನಿಖೆಗೆ ಪ್ರಬಲ ಶಕ್ತಿ ತುಂಬಲು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತೆ ಸೌಜನ್ಯಪರ ಹೋರಾಟಗಾರರಿಗೆ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಪಿ ತಿಮರೋಡಿ ಕರೆ ನೀಡಿದ್ದಾರೆ.
ಈ ಬಗ್ಗೆ ಪ್ರಜಾಪ್ರಭುತ್ವ ವೇದಿಕೆಯ ಕಚೇರಿಯಲ್ಲಿ ಮಾತನಾಡಿ ವೀಡಿಯೋ ಹಂಚಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಕರ್ನಾಟಕ ರಾಜ್ಯ ಸರಕಾರ ಮಾನ್ಯ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಜಿ.ಪರಮೇಶ್ವರ್ ಮುತುವರ್ಜಿಯಲ್ಲಿ ಎಸ್ ಐ ಟಿ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ, ಎಸ್ ಐ ಟಿ ತನಿಖೆಯನ್ನು ನಾವು ಸ್ವಾಗತಿಸಿದ್ದೇವೆ, ಅಧರ್ಮೀಯರು ಧರ್ಮದ ಹೆಸರಲ್ಲಿ ಎಸ್ ಐ ಟಿ ತಂಡವನ್ನು ದುರ್ಬಲ ಮಾಡಲು ಹೊರಟಿದ್ದಾರೆ.
ದುಷ್ಟ ಶಕ್ತಿಗಳ ಹುನ್ನಾರವನ್ನು ಮೆಟ್ಟಿ ನಿಲ್ಲಲು ಎಸ್ ಐ ಟಿ ತಂಡಕ್ಕೆ ಪ್ರಬಲವಾದ ಶಕ್ತಿ ತುಂಬಲು ನಾವು ರಾಜ್ಯಾದ್ಯಂತ ಕರೆಯನ್ನು ಕೊಡಲಿದ್ದೇವೆ, ಮಹಾತ್ಮಾಗಾಂಧೀಜಿಯವರ ಶಾಂತಿ ಮಂತ್ರದಂತೆ ಲಕ್ಷಾಂತರ ಮಂದಿ ಸೇರಿ ಮೌನ ಪ್ರತಿಭಟನೆ ಮಾಡುವ ಬಗ್ಗೆ ಆದಷ್ಟು ಬೇಗ ದಿನ ನಿಗದಿ ಮಾಡಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಸೆಪ್ಟಂಬರ್ 16- 17 ಸಂಕ್ರಮಣ ದಿನದಂದು ಎಸ್ ಐ ಟಿ ಸತ್ಯಪರ ತನಿಖೆಗೆ ಶಕ್ತಿ ತುಂಬಲು ಎಲ್ಲಾ ಮಠ, ಮಂದಿರ ದೇವಸ್ಥಾನ, ದೈವಸ್ಥಾನಗಳಲ್ಲಿ ದೇವರು ದೈವಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕೆಂದು ಸತ್ಯ ಧರ್ಮಪರ ಸೌಜನ್ಯಪರ,
ಪ್ರಜಾಪ್ರಭುತ್ವ ವೇದಿಕೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ವೀಡಿಯೋ ಹಂಚಿಕೊಂಡು ಕರೆ ನೀಡಿದ್ದಾರೆ.















Post Comment