ಉಪ್ಪಿನಂಗಡಿ – ಕಲ್ಲೇರಿ ರಸ್ತೆಯ ಗುಂಡಿ ಮುಚ್ಚಿದ ಖಾಸಗಿ ಬಸ್ ನೌಕರರ ಸಂಘದ ಸದಸ್ಯರು

ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ
ಉಪ್ಪಿನಂಗಡಿ ರಸ್ತೆಯಲ್ಲಿ ಹೊಂಡಾ ಗುಂಡಿ…
ಉಪ್ಪಿನಂಗಡಿ : ಕೆಲವು ಸಮಯಗಳಿಂದ ಅಪಾಯಕಾರಿ ಹೊಂಡ, ಗುಂಡಿಗಳಿಂದ ತೀವ್ರ ಹದಗೆಟ್ಟು ಸಂಚಾರಕ್ಕೆ ಅಡಚಣೆ ಉಂಟಾಗಿರುವ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯನ್ನು
ಬೆಳ್ತಂಗಡಿ – ಉಪ್ಪಿನಂಗಡಿ ಖಾಸಗಿ ಬಸ್ ನೌಕರರ ಸಂಘದ ನೇತೃತ್ವದಲ್ಲಿ ಭಾನುವಾರ ದುರಸ್ತಿಗೊಳಿಸುವ ಮೂಲಕ ಪ್ರಯಾಣಿಕರ ಶ್ಲಾಘನೆಗೆ ಪಾತ್ರರಾದರು. ಬೆಳ್ತಂಗಡಿ – ಉಪ್ಪಿನಂಗಡಿ ಖಾಸಗಿ ಬಸ್ ನೌಕರರ ಸಂಘದ ಅಧ್ಯಕ್ಷ ಸಿದ್ದಿಕ್ ಸಹಿತ ಸಂಘದ ಸದಸ್ಯ ಪದಾಧಿಕಾರಿಗಳನ್ನೊಳಗೊಂಡ 15ರಿಂದ 20 ಮಂದಿ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ
ಕಲ್ಲೇರಿಯಿಂದ – ಉಪ್ಪಿನಂಗಡಿವರೆಗಿನ ರಸ್ತೆಯ ಅಪಾಯಕಾರಿ ಗುಂಡಿ- ಹೊಂಡಗಳನ್ನು ಮುಚ್ಚುವ ಕಾರ್ಯವನ್ನು ನಡೆಸಿದರು.
ತೀವ್ರ ಹದಗೆಟ್ಟಿರುವ ಉಪ್ಪಿನಂಗಡಿ ರಸ್ತೆಯ ಗುಂಡಿ- ಹೊಂಡಗಳನ್ನು ಮುಚ್ಚುವ ಕಾರ್ಯದಲ್ಲಿ ಇಲ್ಯಾಸ್ ಕೆ, ಚಾಬಾ ಕೆ, ನಾರಾಯಣ ಗೌಡ , ಸತೀಶ , ಕೆ.ಎಸ್.ಅಬ್ದುಲ್ಲಾ ಸೇರಿದಂತೆ ಖಾಸಗಿ ಬಸ್ ನೌಕರರ ಸಂಘದ ಸುಮಾರು 15-20 ಮಂದಿ ಪಾಲ್ಗೊಂಡರು. ಇತ್ತೀಚೆಗೆ ಕುಪ್ಪೆಟ್ಟಿಯಿಂದ -ಕಲ್ಲೇರಿವರೆಗಿನ ರಸ್ತೆಯ ಅಪಾಯಕಾರಿ ಗುಂಡಿಗಳನ್ನು ಮುಚ್ಚುವ ಕೆಲಸವನ್ನು
ಸ್ಥಳೀಯ ನಾಗರಿಕರು ಕೈಗೊಂಡಿದ್ದರು.
ಇದೀಗ ಇದೇ ರಸ್ತೆಯ ಕಲ್ಲೇರಿಯಿಂದ ಉಪ್ಪಿನಂಗಡಿವರೆಗಿನ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಮಾಡಿದ
ಖಾಸಗಿ ಬಸ್ ನೌಕರರ ಸಂಘದ ಪದಾಧಿಕಾರಿ, ಸದಸ್ಯರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.














Post Comment