ಅಪರಾಧ
ಕರಾವಳಿ
ಕರ್ನಾಟಕ
ದೇಶ / ವಿದೇಶ
ಪತ್ರಿಕಾ ಪ್ರಕಟಣೆ
ಪ್ರಮುಖ ಸುದ್ದಿ
ನ್ಯೂಸ್ ಕೌಂಟರ್
2 months ago
0 Comments
ಧರ್ಮಸ್ಥಳ ನಿಗೂಢ ಸಾವು, ಅತ್ಯಾಚಾರ- ಕೊಲೆ ಪ್ರಕರಣ, ಭೂಮಾಫಿಯಾ ದೌರ್ಜನ್ಯ ವಿರುದ್ಧ ಸೆ:25ರಂದು ಬೆಂಗಳೂರಿನಲ್ಲಿ ಬೃಹತ್ ನ್ಯಾಯ ಸಮಾವೇಶ

ಹೋರಾಟಗಾರ್ತಿ
ಮಾಜಿ ಸಂಸದೆ ಸುಭಾಷಿನಿ ಉಪಸ್ಥಿತಿ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳು , ಅತ್ಯಾಚಾರ , ಕೊಲೆ , ಭೂಮಾಫಿಯಾ , ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ಬಗ್ಗೆ ತನಿಖೆಗೆ ಒತ್ತಾಯಿಸಿ ಸೆಪ್ಟೆಂಬರ್ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ನ್ಯಾಯ ಸಮಾವೇಶ ನಡೆಯಲಿದೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಎಲ್ಲಾ ಅಸಹಜ ಸಾವುಗಳು , ಅತ್ಯಾಚಾರ , ಕೊಲೆ ಪ್ರಕರಣಗಳನ್ನು ಎಸ್ಐಟಿ ತನಿಖೆಗೆ ಒಳಪಡಿಸಬೇಕು , ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಭೂ ಮಾಫಿಯಾ , ಮೈಕ್ರೋ ಫೈನಾನ್ಸ್ ಅಕ್ರಮ , ದೌರ್ಜನ್ಯಗಳ ಬಗ್ಗೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಬೇಕು , ಎಸ್ಐಟಿ ತಂಡಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಬೇಕು ಮತ್ತು ಎಸ್ಐಟಿ ತನಿಖೆಯನ್ನು
ಹಾದಿ ತಪ್ಪಿಸುವ ರಾಜಕೀಯ ಷಡ್ಯಂತ್ರಗಳನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ ರಾಜ್ಯದ ಎಡ , ದಲಿತ, ಆದಿವಾಸಿ , ಕಾರ್ಮಿಕ , ರೈತ , ವಿದ್ಯಾರ್ಥಿ, ಯುವಜನ , ಮಹಿಳಾ, ಸಾಂಸ್ಕೃತಿಕ ಸಂಘಟನೆಗಳ ಜಂಟಿ ವೇದಿಕೆಯಾದ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ನ್ಯಾಯ ಸಮಾವೇಶ ಸಪ್ಟೆಂಬರ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಹೋರಾಟಗಾರ್ತಿ , ಮಾಜಿ ಸಂಸದೆ ಸುಭಾಷಿನಿ ಅಲಿ ಭಾಗವಹಿಸಲಿದ್ದಾರೆ.
ಜಿಲ್ಲೆಯ ನ್ಯಾಯಪ್ರಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ , ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ವಿನಂತಿಸಿದ್ದಾರೆ.














Post Comment