ಧರ್ಮಸ್ಥಳ ಬಂಗ್ಲೆಗುಡ್ಡ ಕಾಡಿಗೆ ಅಸ್ಥಿಪಂಜರಗಳ ಜಾಡು ಹಿಡಿದು ಹೊರಟ ಎಸ್ ಐ ಟಿ

ಬೆಳ್ತಂಗಡಿ : ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಪರಿಸರದ ಬಂಗ್ಲೆಗುಡ್ಡೆ ಕಾನೂನು ಬಾಹಿರ ಶವ ಸಂಸ್ಕಾರ ಮತ್ತು ಕಳೇಬರ ರಾಶಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ಅಧಿಕಾರಿಗಳು ಮತ್ತೆ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಕಳೇಬರ ಶೋಧ ಕಾರ್ಯ ಆರಂಭಿಸಿದ್ದು ಕುತೂಹಲ ಮೂಡಿದೆ.
ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿರುವುದಾಗಿಯೂ ರಕ್ಷಣೆ ಕೊಟ್ಟಲ್ಲಿ ಸಮಾಧಿಗಳನ್ನು
ತೋರಿಸಲು ಸಿದ್ಧನಿರುವುದಾಗಿಯೂ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದ ಧರ್ಮಸ್ಥಳದ ಮಾಜಿ ಸ್ವಚ್ಛತಾ ಕಾರ್ಮಿಕ ಸಾಕ್ಷಿ ದೂರುದಾರ ಚಿನ್ನಯ್ಯ ತಂದಿದ್ದ ತಲೆಬುರುಡೆ ಇದೇ ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿತ್ತೆಂಬ ಸಂಗತಿ ಬೆಳಕಿಗೆ ಬಂದಿತ್ತು.
ಬುರುಡೆ ಪತ್ತೆಯಾದ ಬಂಗ್ಲೆಗುಡ್ಡೆಯ ಸ್ಥಳ ಮಹಜರಿಗಾಗಿ ವಿಠಲ ಗೌಡ ಅವರನ್ನು ಕರೆದೊಯ್ದ ಸಂದರ್ಭ ಹಲವಾರು ಅಸ್ಥಿಪಂಜರಗಳು ಪತ್ತೆಯಾಗಿದ್ದು ಇದರ ಬೆನ್ನಲ್ಲೇ ಎಸ್ ಐ ಟಿ ತನಿಖೆಯು ಇನ್ನೊಂದು ಆಯಾಮದತ್ತ ತಿರುಗಿದ್ದು ಇದೀಗ ಅರಣ್ಯ ಇಲಾಖೆಯ ಅನುಮತಿ ಪ್ರಕ್ರಿಯೆಗಳನ್ನು ಮುಗಿಸಿದ
ಎಸ್.ಐ.ಟಿ ಬಂಗ್ಲೆಗುಡ್ಡದಲ್ಲಿ ಮತ್ತೆ ಸ್ಥಳ ಪರಿಶೀಲನೆ ಆರಂಭಿಸಿದೆ.
ಎಸ್ ಐ ಟಿ ಸ್ಥಳ ಪರಿಶೀಲನಾ ತಂಡದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯ ಮತ್ತಿತರ ಅಧಿಕಾರಿಗಳು ಇದ್ದಾರೆ.














Post Comment