ಧರ್ಮಸ್ಥಳ ನೂರಾರು ಶವಗಳ ಕಾನೂನುಬಾಹಿರ ದಫನ ಪ್ರಕರಣ: 25 ವರ್ಷಗಳ ಅನಾಥ ಶವಗಳ ಮರಣೋತ್ತರ ಪರೀಕ್ಷೆ, ಶವಾಗಾರ ಖರ್ಚುಗಳ ದಾಖಲೆಯೇ ಇಲ್ಲ…?!

ಧರ್ಮಸ್ಥಳ ನೂರಾರು ಶವಗಳ ಕಾನೂನುಬಾಹಿರ ದಫನ ಪ್ರಕರಣ: 25 ವರ್ಷಗಳ ಅನಾಥ ಶವಗಳ ಮರಣೋತ್ತರ ಪರೀಕ್ಷೆ, ಶವಾಗಾರ ಖರ್ಚುಗಳ ದಾಖಲೆಯೇ ಇಲ್ಲ…?!

Share
IMG-20251024-WA0004-1024x611 ಧರ್ಮಸ್ಥಳ ನೂರಾರು ಶವಗಳ ಕಾನೂನುಬಾಹಿರ ದಫನ ಪ್ರಕರಣ: 25 ವರ್ಷಗಳ ಅನಾಥ  ಶವಗಳ ಮರಣೋತ್ತರ ಪರೀಕ್ಷೆ, ಶವಾಗಾರ ಖರ್ಚುಗಳ ದಾಖಲೆಯೇ ಇಲ್ಲ...?!


ಆರ್ ಟಿ ಐ ಅರ್ಜಿಗೆ ಸ್ಫೋಟಕ ಹಿಂಬರಹ ನೀಡಿದ ಧರ್ಮಸ್ಥಳ ಗ್ರಾಮ ಪಂಚಾಯತ್‌!

ಬೆಳ್ತಂಗಡಿ : “ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2000ರಿಂದ 2025ರವರೆಗೆ ಅನಾಥ ಶವಗಳ ಮರಣೋತ್ತರ ಪರೀಕ್ಷೆ, ಶವಗಳ ವಿಲೇವಾರಿ ಖರ್ಚು ಮತ್ತು ಶವಗಳ ವಾರಿಸುದಾರರು ಪತ್ತೆಯಾಗುವವರೆಗೆ ಶವಗಾರಕ್ಕಾಗಿ ಮಾಡಿದ ಖರ್ಚಿನ ಒಟ್ಟು ಮೊತ್ತಗಳ ಯಾವುದೇ ವಿವರ ಅಥವಾ ಪಾವತಿ ರಶೀದಿ ನಕಲು ಪ್ರತಿ ದಾಖಲೆಗಳು ಲಭ್ಯವಿಲ್ಲ ” ಎಂಬ ಹಿಂಬರಹ ನೀಡಿರುವ ಸ್ಫೋಟಕ ಮಾಹಿತಿಯೊಂದು ಇದೀಗ ಧರ್ಮಸ್ಥಳ ಗ್ರಾಮಪಂಚಾಯತ್ ನಿಂದ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲ್ಲೂಕಿನ ಕನ್ಯಾಡಿ-1 ಗ್ರಾಮದ ನಿವಾಸಿಯಾಗಿರುವ
ಪ್ರಭಾಕರ ನಾಯ್ಕ ಎಂಬವರು ಮಾಹಿತಿ ಹಕ್ಕು ಅಧಿನಿಯಮ- 2005ರಂತೆ (13-10-2025) ಲಿಖಿತವಾಗಿ ಕೇಳಿರುವ ಮಾಹಿತಿಗಳ ಬಗ್ಗೆ ಹಿಂಬರಹ ನೀಡಿರುವ ಧರ್ಮಸ್ಥಳ ಗ್ರಾಮಪಂಚಾಯತ್
ಅನಾಥ ಶವಗಳ ಮರಣೋತ್ತರ ಪರೀಕ್ಷೆಯನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆಸಿ ಶವಗಳ ವಾರಿಸುದಾರರ ಪತ್ತೆ ಹಚ್ಚುವ ಸಮಯದಲ್ಲಿ ಶವವನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶವಗಾರದಲ್ಲಿ ಇಡಲು ಖರ್ಚು ಮಾಡಿದ ಒಟ್ಟು ಮೊತ್ತದ ವಿವರ ಹಾಗೂ ಪಾವತಿ ಮಾಡಿದ ರಶೀದಿಯ ನಕಲು ಪ್ರತಿಯನ್ನು ಒದಗಿಸುವಂತೆ ತಾವು ಅರ್ಜಿ ಸಲ್ಲಿಸಿದ್ದು ಈ ಮಾಹಿತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಕಛೇರಿಯಲ್ಲಿ ಲಭ್ಯವಿಲ್ಲದಿರುವುದಾಗಿ ತಮಗೆ
ಈ ಮೂಲಕ ಮಾಹಿತಿ ನೀಡಲಾಗಿದೆ.”
ಎಂಬ ಹಿಂಬರಹ (16-10-2025) ನೀಡಿರುವುದು ಎಸ್ ಐ ಟಿ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಇನ್ನಷ್ಟು ಅನುಮಾನ, ಕುತೂಹಲಗಳನ್ನು ಹುಟ್ಟು ಹಾಕಿದೆ.
ಜೊತೆಗೆ ಅನಾಥ ಶವಗಗಳ ವಿಲೇವಾರಿ ಸಂಬಂಧಸಿದಂತೆ ಕಾನೂನು ನಿಯಮ ಪಾಲನೆ ಮತ್ತು ದಾಖಲೆ ನಿರ್ವಹಣೆಯಲ್ಲಿ ಗಂಭೀರ ಎಡವಟ್ಟುಗಳನ್ನು ಮಾಡಿಕೊಂಡಿದೆಯೇ? ಉದ್ದೇಶಪೂರ್ವಕವಾಗಿ ಮಹತ್ವದ ಮಾಹಿತಿಗಳನ್ನು ಮರೆಮಾಚಲಾಗಿದೆಯೇ? ಅಥವಾ ಮುಚ್ಚಿಡಲಾಗಿದೆಯೇ? ಎಂಬ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.
ಇನ್ನೊಂದೆಡೆ ಸಾಕ್ಷಿ ದೂರುದಾರ ಚಿನ್ನಯ್ಯ ನ ದೂರು ಮತ್ತು ನ್ಯಾಯಾಂಗ ಹೇಳಿಕೆಯಂತೆ ಧರ್ಮಸ್ಥಳ ಸುತ್ತಮುತ್ತ ನೂರಾರು ಅನಾಥ ಶವಗಳ ಸಮೂಹ ಸಮಾಧಿ ಮತ್ತು ಕಾನೂನುಬಾಹಿರ ಅಂತ್ಯ ಸಂಸ್ಕಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐ ಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮಪಂಚಾಯತ್ ಅಧಿಕೃತವಾಗಿ ನೀಡಿರುವ ಅಚ್ಚರಿಯ ಹಿಂಬರಹದ ಸತ್ಯಾಸತ್ಯತೆಯನ್ನು ಯಾವ ಆಯಾಮದಲ್ಲಿ ಪರಿಗಣಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

InShot_20251003_220916895-4-1024x1024 ಧರ್ಮಸ್ಥಳ ನೂರಾರು ಶವಗಳ ಕಾನೂನುಬಾಹಿರ ದಫನ ಪ್ರಕರಣ: 25 ವರ್ಷಗಳ ಅನಾಥ  ಶವಗಳ ಮರಣೋತ್ತರ ಪರೀಕ್ಷೆ, ಶವಾಗಾರ ಖರ್ಚುಗಳ ದಾಖಲೆಯೇ ಇಲ್ಲ...?!
Screenshot_20251020_063956_WhatsApp-3-549x1024 ಧರ್ಮಸ್ಥಳ ನೂರಾರು ಶವಗಳ ಕಾನೂನುಬಾಹಿರ ದಫನ ಪ್ರಕರಣ: 25 ವರ್ಷಗಳ ಅನಾಥ  ಶವಗಳ ಮರಣೋತ್ತರ ಪರೀಕ್ಷೆ, ಶವಾಗಾರ ಖರ್ಚುಗಳ ದಾಖಲೆಯೇ ಇಲ್ಲ...?!

Post Comment

ಟ್ರೆಂಡಿಂಗ್‌

error: Content is protected !!