ನಾಳೆ ಬೆಳ್ತಂಗಡಿಯಲ್ಲಿ ಹೋರಾಟಗಾರರಿಂದ ಕಪ್ಪು ಬಟ್ಟೆ ಕಟ್ಟಿ ಶಾಂತಿಯುತ ಪ್ರತಿಭಟನೆ

‘ಸುಳ್ಳು ದೂರುಗಳ ವಿರುದ್ಧ ಸಮರ’ ಮನವಿ
ಬೆಳ್ತಂಗಡಿ : ‘ಸುಳ್ಳು ದೂರುಗಳ ವಿರುದ್ಧ ಸಮರ’ ಎಂಬ
ಘೋಷ ವಾಕ್ಯದೊಂದಿಗೆ “ಪೊಲೀಸರು ಸ್ವಯಂ ಪ್ರೇರಿತವಾಗಿ ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಸೌಜನ್ಯ ಹೋರಾಟಗಾರರನ್ನು ಜೈಲಿಗೆ ಕಳಿಸುವ ಷಡ್ಯಂತ್ರ ನಿಲ್ಲಬೇಕು, ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಹೊರಡಿಸಿರುವ ಗಡಿಪಾರು ಆದೇಶವನ್ನು ಹಿಂಪಡೆಯಬೇಕು ಎಂಬ ಎರಡು ಪ್ರಮುಖ ಬೇಡಿಕೆ ಮುಂದಿಟ್ಟು ಅಕ್ಟೋಬರ್ 27ರಂದು ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಿದ್ದಾರೆ.
ಇನ್ನೊಂದೆಡೆ ಇದೇ ದಿನ ವಿಚಾರಣೆಗೆ ಎಸ್ ಐ ಟಿ ಕಚೇರಿಗೆ
ಹಾಜರಾಗುವಂತೆ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ , ಜಯಂತ್ ಟಿ, ಸೌಜನ್ಯ ಮಾವ ವಿಠಲ ಗೌಡ ಅವರಿಗೆ ಎಸ್ ಐ ಟಿ ನೋಟಿಸ್ ನೀಡಿದ್ದು ಸೋಮವಾರ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದು ನೋಟಿಸ್ ನಲ್ಲಿ ಎಸ್ ಐ ಟಿ ಸೂಚಿಸಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ.


















Post Comment