ಲಾಯಿಲಾ; ವಿಧಾನ ಪರಿಷತ್ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಪ.ಜಾ. ಕಾಲೋನಿಯ ನೂತನ ರಸ್ತೆ ಲೋಕಾರ್ಪಣೆ

ಬೆಳ್ತಂಗಡಿ : ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಅವರ 6.25ಲಕ್ಷ ರೂ. ಅನುದಾನದಿಂದ ಲಾಯಿಲಾ
ಗ್ರಾಮಪಂಚಾಯತ್ ವ್ಯಾಪ್ತಿಯ ಗಾಂಧಿನಗರದ ಪ.ಜಾ.ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ
2ನೇ ಅಡ್ಡರಸ್ತೆಯ ರಸ್ತೆಯ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಅವರ ಅನುಪಸ್ಥಿತಿಯಲ್ಲಿ ಬೆಳ್ತಂಗಡಿಯ ನ್ಯಾಯಾವಾದಿ ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲಾ ಹಾಗೂ ಪ.ಜಾ.ಘಟಕ ಜಿಲ್ಲಾ ಮಾಧ್ಯಮ ವಕ್ತಾರ ಜಗನ್ನಾಥ್ ಲಾಯಿಲಾ ನೆರವೇರಿಸಿದರು.
ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ,
ಗ್ರಾಮಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲಾ, ಖಾಲೀದ್ ಕಕ್ಯಾನ, ಮೊಹಮ್ಮದ್ ಅಲಿ ಕಕ್ಯಾನ, ಶರೀಫ್ ಕುಂಟಿನಿ, ಉಬೈದ್ ಕುಂಟಿನಿ, ಸಾವಿತ್ರಿ ಪುತ್ರಬೈಲು , ಸುರೇಶ್ ಬೈರ ಗ್ರೇಸಿ ಲೋಬೋ ,
ವಿವೇಕ್ ಎಸ್ ಡಿ ನಮನ ಉಪಸ್ಥಿತರಿದ್ದರು. ಊರವರು ಪಾಲ್ಗೊಂಡರು.


















Post Comment