ಸೋಣಂದೂರು; ವಿವಾಹಿತ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ : ಐದು ತಿಂಗಳ ಹಿಂದೆ ಮನೆಯಿಂದ ಪೇಟೆಗೆ ಹೋಗುವುದಾಗಿ ಹೇಳಿ ಹೋದ ವ್ಯಕ್ತಿಯೋರ್ವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಇದೀಗ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಸೋಣಂದೂರು ಗ್ರಾಮದ ಪಣಕಜೆ ಸಮೀಪದ ಪೊಮ್ಮಾಜೆ ನಿವಾಸಿ ಶೀನಾ ಮೂಲ್ಯ ಎಂಬವರ ಪುತ್ರ ರವಿಚಂದ್ರ ಎಸ್ ( 41 ವ) ಎಂಬವರು ನಾಪತ್ತೆಯಾದವರು.
ರವಿಚಂದ್ರ ಅವರು 2025ರ ಮೇ 15ರಂದು ಬೆಳಿಗ್ಗೆ ಸುಮಾರು 10:30ರ ಹೊತ್ತಿಗೆ ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ರವಿಚಂದ್ರ ಅವರ ಪತ್ನಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಐದು ತಿಂಗಳ ಬಳಿಕ ದೂರು ನೀಡಿದ್ದಾರೆ.
ಕಾಣೆಯಾಗಿರುವ ವ್ಯಕ್ತಿಯ ಚಹರೆ ವಿವರ: ಸುಮಾರು 5.6 ಅಡಿ ಎತ್ತರ, ಧರಿಸಿರುವ ಬಟ್ಟೆ ನೀಲಿ ಬಣ್ಣದ ಪ್ಯಾಂಟ್, ಹಳದಿ ಬಣ್ಣದ ಉದ್ದ ತೋಳಿನ ಶರ್ಟ್ , ಮಾತನಾಡುವ ಭಾಷೆ ತುಳು ಮತ್ತು ಕನ್ನಡ.
ಈತ ಎಲ್ಲಿ ಯಾದರೂ ಕಂಡು ಬಂದಲ್ಲಿ ಕೂಡಲೇ ಪುಂಜಾಲಕಟ್ಟೆ ಪೊಲೀಸ್ ಠಾಣೆ (08256-286375) ಅಥವಾ ದ.ಕ. ಜಿಲ್ಲಾ ಕಂಟ್ರೋಲ್ ರೂಂ: (0824-2220500)ಗೆ ಸಂಪರ್ಕಿಸುವರೇ ಕೋರಿದೆ.


















Post Comment