ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಆಯ್ಕೆ ಶಿಬಿರಕ್ಕೆ ಶಶಿಕಾಂತ ಸುಲ್ಕೇರಿ ಆಯ್ಕೆ

ಬೆಳ್ತಂಗಡಿ : ರಾಜ್ಯ ಮಟ್ಟದ 16 ವರ್ಷ ವಯೋಮಾನದ
ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ವಿಶೇಷ ಸಾಧನೆ ಮಾಡಿರುವ ಶಶಿಕಾಂತ್ ಸುಲ್ಕೇರಿ ಎಂಬ ಮತ್ತೊಬ್ಬ ಗ್ರಾಮೀಣ ಕ್ರೀಡಾ ಪ್ರತಿಭೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಈಗಾಗಲೇ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು , ಜಿಲ್ಲಾ ಮಟ್ಟಗಳೂ ಸೇರಿದಂತೆ ಮೈಸೂರು ವಿಭಾಗ ಮತ್ತು ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಉತ್ತಮ ಸಾಧನೆ ಮಾಡಿರುವ
ಶಶಿಕಾಂತ ಸುಲ್ಕೇರಿ ಇದೀಗ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಆಯ್ಕೆಗಾಗಿ ನಡೆಸಲ್ಪಡುವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಸುಲ್ಕೇರಿ ಶ್ರೀರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿರುವ ಶಶಿಕಾಂತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಸುಲ್ಕೇರಿ ಗ್ರಾಮದ ಭಂಡಾರಗೋಳಿ ನಿವಾಸಿ ಶ್ರೀಧರ್ ಮತ್ತು ಪುಷ್ಪ ದಂಪತಿಯ ಪುತ್ರ.

















Post Comment