ಧರ್ಮಸ್ಥಳದಲ್ಲಿ ಮಹಿಳೆ ಕೊಲೆ: ಸ್ಪಾಟ್ ನಂ 1ರಲ್ಲೇ ಶವ ಸುಟ್ಟು ಹೂತು ಹಾಕಿರುವ ಪ್ರಕರಣ ಪತ್ತೆಹಚ್ಚಿದ ಹಚ್ಚಿದ ಎಸ್.ಐ.ಟಿ.!

ಬೆಂಗಳೂರು : ಧರ್ಮಸ್ಥಳ ಭಾಗದಲ್ಲಿ ನೂರಾರು ಅತ್ಯಾಚಾರ-ಕೊಲೆ ಮುಂತಾದ ಅಪರಾಧ ಕೃತ್ಯಗಳನ್ನೆಸಗಿ ಕಾನೂನುಬಾಹಿರವಾಗಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ನೀಡಿರುವ ದೂರು ಮತ್ತು ಬಿಎನ್ ಎಸ್ ಎಸ್ 183ರ
ಅಡಿ ನ್ಯಾಯಾಧೀಶರ ಮುಂದೆ ದಾಖಲಿಸಿರುವ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) 2010ರಲ್ಲಿ
ಧರ್ಮಸ್ಥಳದಲ್ಲಿ ನಡೆದ ಮಹಿಳೆಯೊಬ್ಬರ ಕೊಲೆ ಪ್ರಕರಣವನ್ನು ಇದೀಗ ಪತ್ತೆಹಚ್ಚಿದೆ.
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬದಿಯಲ್ಲಿ ಸಮಾಧಿ ಶೋಧ ಕಾರ್ಯಾಚರಣೆ ಸಂದರ್ಭ ಎಸ್ ಐ ಟಿ ಮುಂದೆ ಚಿನ್ನಯ್ಯ ಗುರುತಿಸಿದ ಸ್ಪಾಟ್ ನಂ-1ರಲ್ಲಿ ಕೊಲೆಗೈದ ಮಹಿಳೆಯನ್ನು ಸುಟ್ಟು ಹೂತು ಹಾಕಲಾಗಿದೆ ಎಂಬ ಸ್ಫೋಟಕ ವಿಚಾರವನ್ನು ಇದೀಗ ಎಸ್ ಐಟಿ ಉನ್ನತ ಮೂಲಗಳು ಧೃಡಪಡಿಸಿದ್ದು ಈ ಬಗ್ಗೆ ‘BLR
ಪೋಸ್ಟ್’ ವರದಿ ಮಾಡಿದೆ.
ಬಿಎನ್ ಎಸ್ ಎಸ್ 183ರ ಅಡಿಯಲ್ಲಿ ದಾಖಲಿಸಿದ ಎರಡನೇ ಹೇಳಿಕೆಯಲ್ಲೂ ಕೊಲೆಯಾದ ಮಹಿಳೆಯ ಶವವನ್ನು ಸುಟ್ಟು (ಬಳಿಕ ನೇತ್ರಾವತಿ ಸ್ನಾನಘಟ್ಟದ ಬಳಿ ಸ್ಪಾಟ್ ನಂ-1 ಎಂದು ಗುರುತಿಸಲಾದ ಸ್ಥಳದಲ್ಲಿ ಪೊಲೀಸರ ಸಮ್ಮುಖದಲ್ಲೇ) ಹೂತು ಹಾಕಿರುವ ಗಂಭೀರ ವಿಚಾರವನ್ನು ಚಿನ್ನಯ್ಯ ನ್ಯಾಯಾಧೀಶರ ಮುಂದೆ ದಾಖಲಿಸಿರುವುದನ್ನು ಸ್ಮರಿಸಬಹುದು.
ಚಿನ್ನಯ್ಯ ಹೇಳಿಕೆ ಬಗ್ಗೆ ಎಸ್ ಐಟಿ ತನಿಖೆ ನಡೆಸಿತಾದರೂ ಏನು ನಡೆದಿರಬಹುದು ಎಂಬ ಬಗ್ಗೆ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಏಕಂದರೆ ಸ್ಥಳೀಯರು ಸಹ ಇಂತಹುದೊಂದು ಘಟನೆ ಇಲ್ಲಿ ಸಂಭವಿಸಿರುವ ಬಗ್ಗೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದರು.
ಎಸ್ ಐ ಟಿ ತನಿಖಾ ಸಂದರ್ಭ ಸ್ಥಳೀಯ ಪತ್ರಕರ್ತರೊಬ್ಬರು 2009ರಲ್ಲಿ ತಾನು ಹೊಸ ದ್ವಿಚಕ್ರ ವಾಹನ ಖರೀದಿಸಿದ ಬಳಿಕ
ಈ ಘಟನೆ ಸಂಭವಿಸಿದೆ ಎಂದು ಅಸ್ಪಷ್ಟವಾಗಿ ಮಾಹಿತಿ ನೀಡಿದ್ದರು.
ಆದರೆ ಆ ವರ್ಷದಲ್ಲಿ ಅಂತಹುದೊಂದು ಘಟನೆ ನಡೆದಿರುವುದನ್ನು ಖಚಿತ ಪಡಿಸಿಕೊಳ್ಳಲು ಎಸ್ ಐಟಿಗೆ ಸಾಧ್ಯವಾಗಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿಯು ಪೊಲೀಸ್ ದಾಖಲೆಗಳನ್ನು ಪರಿಶೀಲಿಸಿ ಈ ನಿರ್ಧಿಷ್ಟ ಪ್ರಕರಣದಲ್ಲಿ ಎಫ್ ಐರ್ ದಾಖಲಾಗಿರುವುದನ್ನು ಪತ್ತೆ ಹಚ್ಚಿತ್ತು. ಆ ಪ್ರಕಾರ 111/2010 ಇದು ಎಫ್ ಐಆರ್ ನಂಬರ್. ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿತ್ತು ಮತ್ತು ಶವದಲ್ಲಿ ಸುಟ್ಟ ಗಾಯಗಳ ಗುರುತುಗಳಿದ್ದವು ಎಂದು
ಈ ಎಫ್ ಐಆರ್ ನಲ್ಲಿ ನಮೂದಾಗಿತ್ತು. ಶವವನ್ನು ಹೂತು ಹಾಕಿರುವುದು ಮತ್ತು ಅಂದಿನ ಪತ್ರಿಕೆಗಳಲ್ಲಿ ಈ ಮಹಿಳೆಯ ಶವದ ಭಾವಚಿತ್ರ ಮತ್ತು ಸುದ್ದಿ ಪ್ರಕಟವಾಗಿದ್ದನ್ನು ಎಸ್ ಐಟಿ ಪತ್ತೆ ಹಚ್ಚಿತ್ತು. ಈ ಪ್ರಕರಣದಲ್ಲಿ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ಬೆಳ್ತಂಗಡಿ ಪೊಲೀಸರು ʼಸಿʼ ರಿಪೋರ್ಟ್ ಸಲ್ಲಿಸಿದ್ದರು.
ಚಿನ್ನಯ್ಯ ಪ್ರತಿಪಾದಿಸುತ್ತಿರುವ ಮಾಹಿತಿ, ಹೇಳಿಕೆಯಲ್ಲಿ ಸತ್ಯಾಂಶ ಇದೆ ಎನ್ನುವುದನ್ನು ಈ ವರದಿ ಎತ್ತಿ ತೋರಿಸಿತ್ತು.
ಬೆಳ್ತಂಗಡಿ ನ್ಯಾಯಾಲಯಕ್ಕೆ ನವಂಬರ್ 20 ರಂದು ಸಲ್ಲಿಸಲಾದ ದೂರು ವರದಿಯ ಪ್ರಕಾರ ಹೋರಾಟಗಾರರು, ಧರ್ಮಸ್ಥಳದ ವಿರುದ್ಧ ಯಾವುದೇ ಪಿತೂರಿ ನಡೆಸಿಲ್ಲ ಎಂಬ ತೀರ್ಮಾನಕ್ಕೆ ಬಂದಿಲ್ಲ , ಮತ್ತು ಎಸ್ ಐಟಿಯು ಯಾರಿಗೂ ಕ್ಲೀನ್ ಚಿಟ್ ಕೂಡಾ ನೀಡಿಲ್ಲ ಎನ್ನುವುದು ಮುಖ್ಯ ವಿಚಾರ. ಅಸ್ವಾಭಾವಿಕ ವರದಿಗಳು, ಮಿಸ್ಸಿಂಗ್ ದೂರುಗಳು ಮತ್ತು ಬಂಗ್ಲೆಗುಡ್ಡಕ್ಕೆ ಸಂಬಂಧಪಟ್ಟ ವಿಷಯಗಳ ತನಿಖೆಯನ್ನು ಎಸ್ ಐಟಿ ಚುರುಕುಗೊಳಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.















Post Comment