ಹೆಣ್ಣು ಮಕ್ಕಳ ನ್ಯಾಯಕ್ಕಾಗಿ ಧ್ವನಿ ಎತ್ತದ ಲಕ್ಷ್ಮೀ ಹೆಬ್ಬಾಲ್ಕರ್, ಶೋಭಾ ಕರಂದ್ಲಾಜೆ , ಭಾಗೀರಥಿ ಮುರುಳ್ಯ ಹೆಣ್ಣು ಕುಲಕ್ಕೆ ಅವಮಾನ: ಹೋರಾಟಗಾರ್ತಿ ಪ್ರಸನ್ನ ರವಿ ವಾಗ್ದಾಳಿ!

ಬೆಳ್ತಂಗಡಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾವ ಕಲ್ಯಾಣ ಕಾರ್ಯವನ್ನೂ ಮಾಡಿಲ್ಲ, ದಕ್ಷಿಣ ಕನ್ನಡದ ಶೋಭಾ ಕರಂದ್ಲಾಜೆ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸದನದಲ್ಲಿ ಒಂದೇ ಒಂದು ಭಾರಿ ಹೆಣ್ಣು ಮಕ್ಕಳ ಅತ್ಯಾಚಾರ-ಕೊಲೆಗಳ ಬಗ್ಗೆ ಧ್ವನಿ ಎತ್ತಿದವರಲ್ಲ ನೀವು ಹೆಣ್ಣು ಕುಲಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳ ಅಸಹಜ ಸಾವುಗಳು, ಹೆಣ್ಣು ಮಕ್ಕಳ ಅತ್ಯಾಚಾರ-ಕೊಲೆ ಪ್ರಕರಣಗಳ ನ್ಯಾಯಕ್ಕಾಗಿ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ‘ಕೊಂದವರು ಯಾರು’ ಬೃಹತ್ ಮಹಿಳಾ ನ್ಯಾಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಒಬ್ಬ ಶಾಸಕ ಹೇಳುತ್ತಾನೆ ಷಡ್ಯಂತ್ರ ಮಾಡಿದ ಬರುಡೆ ಗ್ಯಾಂಗ್ ಗೆ ಗುಂಡು ಹೊಡೆಯಬೇಕು ಎಂದು ಹೇಳುತ್ತಾನೆ, ತಾಕತ್ತಿದ್ರೆ, ಹೆಣ್ಣು ಮಕ್ಕಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳಲಿ ನೋಡೋಣ, ಅದು ನಿಮ್ಮ ತಾಕತ್ತು ಎಂದು ಸವಾಲು ಹಾಕಿದರು.
ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ-ಕೊಲೆಗಳಾದಾಗ ಯಾರೂ ನ್ಯಾಯ ಕೊಡಿಸದೆ ಇದ್ದಾಗ ಬೀದಿಯಲ್ಲಿ ಬಂದು ಹೆಣ್ಣು ಮಕ್ಕಳು ಹೋರಾಟ ಮಾಡುವ ಪರಿಸ್ಥಿತಿ ಬರುವಾಗ ಇದು ಭಾರತಾಂಬೆಗೂ ತಾಯಿ ಭುವನೇಶ್ವರಿಗೂ ಮಾಡಿದ ಅವಮಾನ ಅಲ್ಲವೇ?
ಮಾತೆತ್ತಿದ್ರೆ ಹೇಳ್ತೇವೆ, ಭಾರತ ಮಾತೆ,ಗೋಮಾತೆ, ಹಲವಾರು ನದಿಗಳಿಗೆ ನಮ್ಮ ಹೆಸರನ್ನಿಡುತ್ತಿದ್ದೇವೆ, ಗೋಧಾವರಿ,ಶರಾವತಿ, ಕಾವೇರಿ, ತುಂಗಭದ್ರೆ, ನರ್ಮದಾ ಅಂತ, ಇಲ್ಲಿ ನೇತ್ರಾವತಿ ಎಂಬ ನದಿಯ ತಟದಲ್ಲಿ ನಮ್ಮ ಹೆಣ್ಣು ಮಕ್ಕಳನ್ನು ಬರ್ಬರವಾಗಿ ಅತ್ಯಾಚಾರ-ಕೊಲೆ ಮಾಡಿ ಬಿಸಾಡುವಾಗ ಮೂಕ ಪ್ರೇಕ್ಷಕರಾಗಿ ನೋಡುವವರಿಗೆ ಏನು ಹೇಳಬೇಕು ? ಎಂದು ಪ್ರಶ್ನಿಸಿದ ಪ್ರಸನ್ನ ರವಿ ಈಗ ಕಾಲ ಬಂದಿದೆ ಕೊಂದವರು ಯಾರು? ಎಂಬ ಪ್ರಶ್ನೆ ಈಗ ಹೆಣ್ಣು ಮಕ್ಕಳು ಕೇಳಬೇಕಾಗಿದೆ ಎಂದು ಪ್ರಸನ್ನ ರವಿ ಹೇಳಿದರು.
ಅತ್ಯಾಚಾರಿಗಳನ್ನು ಅವತ್ತೇ ಗುಂಡು ಹೊಡೆದು ಕೊಲ್ಲುತ್ತಿದ್ರೆ ಇವತ್ತು ಪ್ರತಿಭಟನೆ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.

ಹದಿಮೂರು ವರ್ಷಗಳಿಂದ ಸೌಜನ್ಯಳ ತಾಯಿ ನ್ಯಾಯಕ್ಕಾಗಿ ಪರಿತಪಿಸುತ್ತಿದ್ದಾರೆ, ವೇದವಲ್ಲಿ, ಪದ್ಮಲತಾ, ಆನೆ ಮಾವುತ, ಸೌಜನ್ಯ ಪ್ರಕರಣ, ಅತ್ಯಾಚಾರಿಗಳು ಯಾರು ಕೊಂದವರು ಯಾರು ಎನ್ನುವುದು ಜನರಿಗೆ ತಿಳಿದಿದೆ ಕಾನೂನಾತ್ಮಕವಾಗಿ ತಿಳಿಯಬೇಕಾಗಿದೆ ಎಂದರು.
ನಮ್ಮನ್ನು ಅಳುವ ರಾಜಕೀಯ ಪಕ್ಷದವರು ಸದನದಲ್ಲಿ ಚರ್ಚೆ ಮಾಡಬೇಕಿತ್ತು, ಕೊಂದವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಬೇಕಿತ್ತು, ಅವರು ಯಾವುದೋ ವಿಷಯವನ್ನು ಎತ್ತಿಕೊಂಡು ದೊಂಬರಾಟ ಮಾಡುತ್ತಿದ್ದಾರೆ, ಹೆಣ್ಣಿನ ನ್ಯಾಯಕ್ಕಾಗಿ ತುಡಿಯುವ ಒಂದೇ ಒಂದು ಎಂ ಎಲ್ ಎ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಶೋಭಾ ಕರಂದ್ಲಾಜೆ ಸದನದಲ್ಲಿ ಸೌಜನ್ಯಳ ಬಗ್ಗೆ ಒಂದೇ ಒಂದು ಮಾತನಾಡದ ನೀವು ಗೌಡ ಸಮುದಾಯಕ್ಕೆ ಸೇರಿದ ಎಂ ಎಲ್ ಎ ನೀವೊಂದು ಹೆಣ್ಣಾ? ಎಂದು ನಾನು ಕೇಳುತ್ತೇನೆ, ಮಹಿಳಾ ಆಯೋಗದ ಅಧ್ಯಕ್ಷರು ಪ್ರಶ್ನೆ ಕೇಳುತ್ತಿದ್ದಾರೆ, ಎಸ್ ಐ ಟಿ ತನಿಖೆ ನಡೆಸುವಂತೆ ಹೇಳುತ್ತಿದ್ದಾರೆ.
ಹೆಣ್ಣು ಮಕ್ಕಳ ಜೊತೆ ನಿಂತಿದ್ದಾರೆ ಸಿದ್ದರಾಮಯ್ಯ ನಮಗೆ ಸರ್ಕಾರದ ಮೇಲೆ ನಂಬಿಕೆ ಇದೆ, ಆದರೆ ಎಸ್ ಐ ಟಿ ಯವರು ಅಹಂಕಾರ, ನಿರ್ಲಕ್ಷ್ಯ ಬಿಟ್ಟು ಹೆಣ್ಣು ಮಕ್ಕಳ ಸಾವಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
















Post Comment