ಬೆಳ್ತಂಗಡಿಯಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು’ ದಲಿತರ ಹಕ್ಕೊತ್ತಾಯ ಜಾಥಾ – ಸಮಾವೇಶಕ್ಕೆ ಚಾಲನೆ

ಬೆಳ್ತಂಗಡಿ : ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿಯ ಆಶ್ರಯದಲ್ಲಿ, ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಇದರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶವು ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಮಂದಿರ ಬಳಿಯಿಂದ ಮೆರವಣಿಗೆ ಹೊರಡುವ ಮೂಲಕ ಚಾಲನೆ ನೀಡಲಾಯಿತು.
ಬೆಳ್ತಂಗಡಿ ಅಯ್ಯಪ್ಪಗುಡಿಯ ಬಳಿಯಿಂದ ಹೊರಟು ಮುಖ್ಯ ರಸ್ತೆಯ ಮೂಲಕ ಸಾಗಿದ ಜಾಥಾವು ‘ನಮ್ಮ ಭೂಮಿ-ನಮ್ಮ ಹಕ್ಕು’ ಘೋಷಣೆಗಳೊಂದಿಗೆ ಸಿ.ವಿ.ಸಿ ಹಾಲ್ ಗೆ ಸಾಗಿತು. ಸಮಾವೇಶದಲ್ಲಿ
ಭೂಮಿಗೆ ಸಂಬಂಧಿಸಿ 11 ಹಾಗೂ ಶಿಕ್ಷಣಕ್ಕೆ ಸಂಬಂಧಿಸಿ 3 ಹಕ್ಕೊತ್ತಾಯಗಳು ಮಂಡನೆಯಾಗಲಿದೆ.
ವೇದಿಕೆಯಲ್ಲಿ ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿ
ಸಂಚಾಲಕ ಎಂ.ಬಿ. ಕರಿಯ ಪ್ರಸ್ತಾವನೆಗೈದರು. ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಸಮಾವೇಶದ ಉದ್ದೇಶವನ್ನು ತಿಳಿಸಿದರು.
ವೇದಿಕೆಯಲ್ಲಿ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್, ಚಿಂತಕ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ , ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಚಾಲಕ ರಮೇಶ್ ಆರ್, ಪ್ರಮುಖರಾದ ಸದಾಶಿವ ಹೆಗ್ಡೆ, ಬಾಬಿ ಮಾಲಾಡಿ, ಸಹ ಸಂಚಾಲಕರಾದ ಬಾಬು.ಎ,
ನಾರಾಯಣ ಕಿಲಂಗೋಡಿ, ಸುಕೇಶ್ ಮಾಲಾಡಿ ಉಪಸ್ಥಿತರಿದ್ದರು.















Post Comment