ಹಕ್ಕಿನ ಭೂಮಿಯನ್ನು ಒದಗಿಸದಿದ್ದರೆ ದಲಿತರನ್ನು ಗಡಿಪಾರು ಮಾಡಿದಂತೆ : ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

ಹಕ್ಕಿನ ಭೂಮಿಯನ್ನು ಒದಗಿಸದಿದ್ದರೆ ದಲಿತರನ್ನು ಗಡಿಪಾರು ಮಾಡಿದಂತೆ : ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

Share

ಬೆಳ್ತಂಗಡಿ : ದಲಿತರಿಗೆ ಸಿಗಬೇಕಾದ ಭೂಮಿಯನ್ನು ಒದಗಿಸದೆ ಇದ್ದರೆ ದಲಿತರನ್ನು ಗಡಿಪಾರು ಮಾಡಿದಂತೆ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಅವರು ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿಯ
ಆಶ್ರಯದಲ್ಲಿ, ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಇದರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ನಡೆದ ತಾಲೂಕು ಮಟ್ಟದ ‘ನಮ್ಮ ಭೂಮಿ ನಮ್ಮ ಹಕ್ಕು’ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ನಾನು ಕಂಡ ಹಾಗೆ ಶಾಸಕಾಂಗ ದಲಿತರ ಪರ ಇಲ್ಲ ಅದು ಪ್ರಬಲರ ಪರ, ಸರಕಾರಕ್ಕೆ ಇದು ನಮ್ಮ ಬೇಡಿಕೆಯಲ್ಲ, ಮನವಿಯಲ್ಲ, ಭಿಕ್ಷೆಯಲ್ಲ, ನಿಮ್ಮ ಕರ್ತವ್ಯವನ್ನು ನೆನಪಿಸುವುದು ಎಂದರು.

ಬೆಳ್ತಂಗಡಿ ಅಯ್ಯಪ್ಪಗುಡಿಯ ಬಳಿಯಿಂದ ಹೊರಟು ಮುಖ್ಯ ರಸ್ತೆಯ ಮೂಲಕ ಸಾಗಿದ ಜಾಥಾವು ‘ನಮ್ಮ ಭೂಮಿ-ನಮ್ಮ ಹಕ್ಕು’ ಘೋಷಣೆಗಳೊಂದಿಗೆ ಸಿ.ವಿ.ಸಿ ಹಾಲ್ ನಲ್ಲಿ ಸಮಾವೇಶ ಗೊಂಡಿತು.
ಸಮಾವೇಶದಲ್ಲಿ ಭೂಮಿಗೆ ಸಂಬಂಧಿಸಿ 11 ಹಾಗೂ ಶಿಕ್ಷಣಕ್ಕೆ ಸಂಬಂಧಿಸಿ 3 ಪ್ರಮುಖ ಹಕ್ಕೊತ್ತಾಯಗಳೂ ಸೇರಿದಂತೆ
ಹಲವಾರು ಬೇಡಿಕೆಗಳನ್ನು ವಿವರಿಸಲಾಯಿತು.

ದಲಿತರ ಶಿಕ್ಷಣ ಮತ್ತು ಭೂಹಕ್ಕೊತ್ತಾಯ ಸಮಿತಿ ಸಂಚಾಲಕ ಎಂ.ಬಿ. ಕರಿಯ ಪ್ರಸ್ತಾವನೆಗೈದರು.
ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಸಮಾವೇಶದ ಉದ್ದೇಶವನ್ನು ತಿಳಿಸಿದರು.
ವೇದಿಕೆಯಲ್ಲಿ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್,
ಪ್ರೆಸ್ ಕ್ಲಬ್ ಕೌನ್ಸಿಲ್ ನ ರಾಜ್ಯಾಧ್ಯಕ್ಷ , ‘ಪೊಲೀಸ್ ವಾಣಿ’ ಪತ್ರಿಕೆಯ ಸಂಪಾದಕ ರಾಘವೇಂದ್ರಾಚಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಚಾಲಕ ರಮೇಶ್ ಆರ್,
ಜಿ.ಪಂ. ಮಾಜಿ ಸದಸ್ಯೆ ಸಿ.ಕೆ. ಚಂದ್ರಕಲಾ, ಕಾರ್ಮಿಕ ಮುಖಂಡ, ನ್ಯಾಯವಾದಿ ಬಿ.ಎಂ. ಭಟ್, ಪ್ರಮುಖರಾದ ಸದಾಶಿವ ಹೆಗ್ಡೆ , ಬಾಬಿ ಮಾಲಾಡಿ, ಸಹ ಸಂಚಾಲಕರಾದ ಬಾಬು.ಎ., ನಾರಾಯಣ ಕಿಲಂಗೋಡಿ, ಸುಕೇಶ್ ಮಾಲಾಡಿ ಮತ್ತಿತರರು ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!