ಬಂದಾರು ಸರಕಾರಿ (ಉ) ಪ್ರಾಥಮಿಕ ಶಾಲಾ ‘ಪ್ರತಿಭಾ ಪುರಸ್ಕಾರ’ ಸಮಾರಂಭ

ಬಂದಾರು ಸರಕಾರಿ (ಉ) ಪ್ರಾಥಮಿಕ ಶಾಲಾ ‘ಪ್ರತಿಭಾ ಪುರಸ್ಕಾರ’ ಸಮಾರಂಭ

Share

ಗ್ರಾಮೀಣ ಶಾಲೆಯ ಅಭಿವೃದ್ಧಿಯ ಪವಿತ್ರ ಕಾರ್ಯದಲ್ಲಿ , ಪೋಷಕರು, ಊರವರು, ಶಿಕ್ಷಣ ಇಲಾಖೆ ನನ್ನ ಜೊತೆಗಿರಬೇಕು : ಮೋಹನ್ ಕುಮಾರ್

ಬಂದಾರು : ನನ್ನದೊಂದು ಕನಸಿದೆ ಆ ಕನಸಿಗೆ ಊರವರು, ಪೋಷಕರು, ಶಿಕ್ಷಕರು, ದಾನಿಗಳು ಮತ್ತು ಈ ಹಿಂದೆ ಸಹಕಾರ ನೀಡಿದ ರೀತಿಯಲ್ಲಿ ಶಿಕ್ಷಣ ಇಲಾಖೆ ಜೊತೆಗಿರಬೇಕು ಎಂದು ಲಕ್ಷ್ಮಿ ಗ್ರೂಪ್ ಮಾಲಕ, ಉಜಿರೆ ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.

ಅವರು ಡಿ: 24ರ ಬುಧವಾರ ಜರಗಿದ ದ.ಕ.ಜಿ.ಪಂ. ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂದಾರು ಇಲ್ಲಿನ ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಕೊಯ್ಯೂರು ಮತ್ತು ಬದನಾಜೆ ಶಾಲೆಗಳನ್ನು
ಅಮೃತ ಮಹೋತ್ಸವ ಸಂದರ್ಭ ಅಭಿವೃದ್ಧಿಗೊಳಿಸಿ ಹಸ್ತಾಂತರ ಮಾಡಲಾಗಿದೆ, ಶಿಶಿಲದಲ್ಲಿ ಒಂಭತ್ತನೇ ಶಾಲೆಯನ್ನು ಅಭಿವೃದ್ಧಿ ಮಾಡಲಿದ್ದೇವೆ, ಶಿಕ್ಷಣ ಇಲಾಖೆಗೆ ಆಭಾರಿಯಾಗಿದ್ದೇನೆ ಎಂದರು.

ಶಿಕ್ಷಕರು ರಾಜಕೀಯ ರಹಿತವಾಗಿ ಮಕ್ಕಳಲ್ಲಿರುವ ಕ್ರೀಡೆಯನ್ನು ಗುರುತಿಸಿ ಬೆಳಕಿಗೆ ತರಬೇಕೆಂದು ವಿನಂತಿಸುತ್ತೇನೆ ಎಂದ ಅವರು
ಹತ್ತನೇ ಶಾಲೆಯಾಗಿ ಪರಿಗಣಿಸಿದರೂ ಈ ಶಾಲೆಯನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತೇನೆ ಶಾಲೆಯ ಜೊತೆ ನಿಲ್ಲುತ್ತೇನೆ ಎಂದು ಅವರು ಭರವಸೆ ನೀಡಿದರು.

20251224_111509-1024x743 ಬಂದಾರು ಸರಕಾರಿ (ಉ) ಪ್ರಾಥಮಿಕ ಶಾಲಾ 'ಪ್ರತಿಭಾ ಪುರಸ್ಕಾರ' ಸಮಾರಂಭ

ನನ್ನ ಜೊತೆ ರೋಟರಿ ಸೇರಿದಂತೆ ಇತರ ಸಂಘ ಸಂಸ್ಥೆಗಳು, ಪತ್ರಕರ್ತರ ಸಂಘ ಸೇರಿಕೊಂಡು ಭೇಟಿ ಕೊಟ್ಟು ಶಾಲೆಯ ಅಭಿವೃದ್ಧಿ ಬಗ್ಗೆ ಸಮಾಲೋಚನಾ ಸಭೆ ಕರೆಯುತ್ತೇನೆ, ಮಕ್ಕಳ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನನ್ನ ಪವಿತ್ರ ಕಾರ್ಯದಲ್ಲಿ ಜೊತೆಯಾಗಬೇಕು ನಿಮ್ಮೆಲ್ಲರ ಪ್ರೀತಿಯೇ ಈ ಕಾರ್ಯಕ್ಕೆ ಸ್ಫೂರ್ತಿ ನೀಡುತ್ತದೆ ಎಂದರು.
ಊರವರನ್ನು ಸೇರಿಸಿಕೊಂಡು ಶಾಲೆಗೆ ರಂಗಮಂದಿರದ ಬಗ್ಗೆಯೂ
ಚಿಂತನೆ ಮಾಡಬೇಕು, ನೀವು ಮನಸ್ಸು ಮಾಡಿದ್ರೆ ಖಂಡಿತವಾಗಿಯೂ ಶಾಲೆಯ ಅಭಿವೃದ್ಧಿ ಕಷ್ಟ ವಲ್ಲ ಏಕೆಂದರೆ ಕೊಡುವ ಮನಸ್ಸುಗಳಿರುವುದು ನಗರದಲ್ಲಿ ಅಲ್ಲ , ಗ್ರಾಮೀಣ ಪ್ರದೇಶದಲ್ಲಿ ಎಂದು ಮೋಹನ್ ಕುಮಾರ್ ಹೇಳಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮೇಶ
ಗೌಡ ಪೊಯ್ಯೊಲೆ ಅವರ ಅಧ್ಯಕ್ಷತೆವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಆರಿಕೋಡಿ ಶ್ರೀ ಕ್ಷೇತ್ರದ ಧರ್ಮದರ್ಶಿ ಹರೀಶ್ ಶುಭ ಹಾರೈಸಿದರು.
ಮೋಹನ್ ಕುಮಾರ್ ಅವರಿಗೆ ಶಾಲೆಯ ಮನವಿಯನ್ನು ಹಸ್ತಾಂತರಿಸಲಾಯಿತು.


ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ದಿನೇಶ್ ಖಂಡಿಗ, ಉಪಾಧ್ಯಕ್ಷೆ ಪುಷ್ಪಾವತಿ, ಸಿಆರ್ ಪಿ ವಾರಿಜಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಗ್ರಾ.ಪಂ. ಸದಸ್ಯರಾದ ಚೇತನ್, ವಿಮಲ,
ಎಸ್ ಕೆ ಡಿ ಆರ್ ಡಿ ಪಿ ಒಕ್ಕೂಟದ ಅಧ್ಯಕ್ಷೆ ವಿಜಯಾ ಉಪಸ್ಥಿತರಿದ್ದರು.
ಪದ್ಮುಂಜ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಪಾಂಜಾಳ
ಮತ್ತಿತರರು ಇದ್ದರು.
ಸಮಾರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಕ್ರೀಡಾ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಪೋಷಕರ, ಹಳೆ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ, ದಾನಿಗಳಿಗೆ, ಪ್ರಾಯೋಕರಿಗೆ, ವಿವಿಧ ಸಹಕಾರಗಳನ್ನಿತ್ತ ವಿದ್ಯಾಭಿಮಾನಿಗಳಿಗೆ
ಸ್ಮರಣಿಕೆ ಶಾಲುಗಳೊಂದಿಗೆ ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯಗಳು ಜರಗಿದವು.
ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳು, ಪೋಷಕರು, ದಾನಿಗಳು, ವಿದ್ಯಾಭಿಮಾನಿಗಳು ಪಾಲ್ಗೊಂಡರು. ಎಸ್ ಡಿ ಎಂ ಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು.

ಮುಖ್ಯೋಪಾಧ್ಯಾಯರಾದ ವಿಶ್ವನಾಥ ಸ್ವಾಗತಿಸಿದರು. ಸಹ ಶಿಕ್ಷಕರಾದ ಮೋಹನ್ , ರಫೀಕ್, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

Post Comment

ಟ್ರೆಂಡಿಂಗ್‌

error: Content is protected !!