ಕಣಿಯೂರು ಗ್ರಾ.ಪ್ರಂ. ಮಟ್ಟದ ಜನಸ್ಪಂದನ ಸಭೆ

ಆ ರಸ್ತೆಯನ್ನು ಆ ಕಲ್ಕುಡನೇ ರಿಪೇರಿ ಮಾಡಬೇಕಷ್ಟೆ!
ಅಧಿಕಾರಿಗಳ ಮುಂದೆ ಗ್ರಾಮಸ್ಥನ ಆಕ್ರೋಶ
ಬೆಳ್ತಂಗಡಿ : ಕಣಿಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೊಳ್ಳರಮಜಲು ಎಂಬಲ್ಲಿ ರಸ್ತೆ ಕುಸಿದು ಕೆಲವು ಸಮಯಗಳೇ ಆಯಿತು. ಈ ಬಗ್ಗೆ ಗ್ರಾಮಸಭೆಯಲ್ಲಿ ಹೇಳಿದ್ರೂ ಗ್ರಾಮಪಂಚಾಯತ್ ನಲ್ಲಿ ವಿನಂತಿಸಿಕೊಂಡರೂ
ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಇನ್ನು ರಸ್ತೆಯನ್ನು ಆ ಕಲ್ಕುಡನೇ ಸರಿ ಮಾಡಬೇಕಷ್ಟೆ ಎಂದು ಆಕ್ರೋಶಗೊಂಡ ಗ್ರಾಮಸ್ಥರೊಬ್ಬರು ಹೇಳಿದ ಪ್ರಸಂಗ ಶಾಸಕರ ಅಧ್ಯಕ್ಷತೆಯಲ್ಲಿ ಪದ್ಮುಂಜದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಬುಧವಾರ ನಡೆದಿದೆ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಬುಧವಾರ ನಡೆದಿದ್ದು ಪದ್ಮುಂಜ-ಕಣಿಯೂರು ರಸ್ತೆಯ ಬೊಳ್ಳರಮಜಲು ಎಂಬಲ್ಲಿ ರಸ್ತೆ ಕಾಂಕ್ರೀಟ್ ರಸ್ತೆ ಕುಸಿದು ಅಪಾಯಕಾರಿಯಾಗಿದೆ, ತಡೆಗೋಡೆ ಮಾಡಿಸುವಂತೆ ಕೆಲವು ಸಮಯಗಳಿಂದ ಹೇಳಿ ಕೇಳಿ ಸಾಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಭೆಯಲ್ಲಿ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಸಂಬಂಧಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷರಾದ ಸೀತಾರಾಮ ಮಡಿವಾಳ ಬೊಳ್ಳರಮಜಲು ಪ್ರದೇಶದದ ಮೂರು ವರ್ಷಗಳಿಂದ ಟಿ.ಸಿ. ಸಮಸ್ಯೆ ಇದೆ ಇಲಾಖಾ ಜೆಇ ಅಥವಾ ಕೆಳಗಿನ ಅಧಿಕಾರಿಗಳು ಲೆಕ್ಕಕ್ಕಿದ್ದಾರೆ.
ಗ್ರಾಮಪಂಚಾಯತ್ ಅಧ್ಯಕ್ಷನಾಗಿ ಜೆ.ಇ. ವಾರಗಟ್ಟಲೆ ಕಾಲ್ ಮಾಡಿದ್ರೂ ಅವರು ರಿಸೀವ್ ಮಾಡುತ್ತಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಯಾ ಇಲಾಖಾಧಿಕಾರಿಗಳು ತಮ್ನ ಇಲಾಖೆಗಳಿಗೆ ಸಂಬಂಧಪಟ್ಟ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಉತ್ತರಿಸಿದರು.
ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದ ಬಗ್ಗೆ ಅದೇ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಯಾಗಿರುವ
ನಿವೃತ್ತ ಸೈನಿಕನ ಆಕ್ಷೇಪ ಕಿರುಕುಳ ನೀಡುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಶಾಲೆಯ ಜಾಗವನ್ನು ಯಾವ ಕಾರಣಕ್ಕೂ ಯಾರಿಗೂ ಮಂಜೂರಾತಿ ಮಾಡುವುದಿಲ್ಲ, ಯಾರೂ ಆತಂಕಪಡುವ ಅಗತ್ಯ ಇಲ್ಲ ; ಎಂದು ತಹಶಿಲ್ದಾರ್ ಪೃಥ್ವಿ ಸಾನಿಕಂ ತಿಳಿಸಿದರು.
ತಾ.ಪಂ. ಇಒ. ಭವಾನಿಶಂಕರ್, ಗ್ರಾ.ಪಂ. ಪಿಡಿಒ. ಗೀತ, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ. ಉಪಸ್ಥಿತರಿದ್ದರು.















Post Comment