ಕರಂಬಾರು ; ತಾಯಿಯ ಉತ್ತರಕ್ರಿಯೆ ಬೆನ್ನಲ್ಲೇ ಮಗ ನಿಧನ

ಕರಂಬಾರು ; ತಾಯಿಯ ಉತ್ತರಕ್ರಿಯೆ ಬೆನ್ನಲ್ಲೇ ಮಗ ನಿಧನ

Share

ಬೆಳ್ತಂಗಡಿ : ತಾಯಿಯ ಉತ್ತರಕ್ರಿಯೆ ಬೆನ್ನಲ್ಲೇ ಮಗ ಅನಾರೋಗ್ಯದಿಂದ ಮೃತರಾದ ಘಟನೆ ಕರಂಬಾರು ಗ್ರಾಮದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಾಜಿಮುಗೇರು ದರ್ಬೆ ನಿವಾಸಿ ಚನ್ನು (70) ಎಂಬವರು ಇತ್ತೀಚೆಗೆ ನಿಧನರಾಗಿದ್ದು ಇವರ ಉತ್ತರಕ್ರಿಯೆಯು ಕಳೆದ ಮಂಗಳವಾರ ನಡೆದಿತ್ತು.

ತಾಯಿಯ ಉತ್ತರಕ್ರಿಯೆ ಮರುದಿನ ಅವರ ಮಗ ಮಹಾಬಲ ಎಂಬವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಹಾಬಲ (42) ಅವರು ಚಿಕಿತ್ಸೆಗೆ ಸ್ಪಂದಿಸದೆ ತಮ್ಮ ತಾಯಿ ಮರಣದ 18ನೇ ದಿನಕ್ಕೆ ನಿಧನರಾಗಿದ್ದು ಇವರ ಕುಟುಂಬಕ್ಕೆ ಒಂದರ ಬೆನ್ನಲ್ಲೇ ಇನ್ನೊಂದು ಆಘಾತ ಬಂದಂತಾಗಿದೆ.
ಮೃತರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಸಹೋದರ ಇಬ್ಬರು ಸಹೋದರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!