“ಯಾವುದೇ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಚಲನವಲನ ದಾಖಲೆ ನಿರ್ವಹಿಸಲಾಗುತ್ತಿಲ್ಲ..”

“ಯಾವುದೇ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಚಲನವಲನ ದಾಖಲೆ ನಿರ್ವಹಿಸಲಾಗುತ್ತಿಲ್ಲ..”

Share

ಬೆಳ್ತಂಗಡಿ : ತಾಲೂಕು ಕೇಂದ್ರದಲ್ಲಿರುವ ಯಾವುದೇ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ, ಸಿಬ್ಬಂದಿಗಳ ಚಲವಲನ ನೋಂದಣಿ ನಿರ್ವಹಣೆ ಮಾಡಲಾಗುತ್ತಿಲ್ಲ , ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಧಿಕಾರಿಗಳ ಚಲನವಲನ ದಾಖಲಿಸಬೇಕು, ಯಾವ ವಿಭಾಗಕ್ಕೆ ಜನರು ಹೋದರೂ ಹೆಚ್ಚಿನ ಸಂದರ್ಭಗಳಲ್ಲಿ ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿಗಳು ಇರುವುದಿಲ್ಲ ಹೊರಗೆ ಹೋಗಿರುತ್ತಾರೆ. ಎಂದು ‘ಜೈಕನ್ನಡಮ್ಮ’ ವಾರಪತ್ರಿಕೆಯ ಸಂಪಾದಕರಾದ ದೇವಿಪ್ರಸಾದ್ ಅವರು ಒತ್ತಾಯಿಸಿದರು.
ಈ ಬಗ್ಗೆ ಮಧ್ಯೆ ಪ್ರವೇಶಿಸಿದ ಶಾಸಕ ಹರೀಶ್ ಪೂಂಜ ಅವರು ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ, ಅಧಿಕಾರಿಗಳ ಚಲನವಲನ ಪುಸ್ತಕ ನಿರ್ವಹಣೆ ಮಾಡಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಹಾಗೂ ಇಲಾಖಾ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಿತು.

ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಜನರ ಬಳಿಗೆ ತಾಲೂಕು ಆಡಳಿತ ಎಂಬ ಪರಿಕಲ್ಪನೆಯೊಂದಿಗೆ ಕಳೆದ ಮೂರು ತಿಂಗಳಿಂದ 48 ಗ್ರಾಮಪಂಚಾಯತ್ ಗಳ ಮಟ್ಟದಲ್ಲಿ ಹಂತ ಹಂತವಾಗಿ ಜನಸ್ಪಂದನ ಸಭೆಗಳು ನಡೆದಿದ್ದು ಡಿ.31 ರಂದು ಯಶಸ್ವಿಯಾಗಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಪೂರ್ಣಗೊಂಡಿದೆ. ಜನಸ್ಪಂದನ ಸಭೆಯಲ್ಲಿ ಪ್ರಸ್ತಾಪಗೊಂಡ ಸಮಸ್ಯೆಗಳಿಗೆ ಕಿವಿಯಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.

ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವ ಸಂದರ್ಭದಲ್ಲಿ ಹೋದರೂ ವೈದ್ಯರು ಇರುವುದಿಲ್ಲ ಎಂಬ ವಿಚಾರವನ್ನು ಪತ್ರಕರ್ತ ದೇವಿಪ್ರಸಾದ್ ಪ್ರಸ್ತಾಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ‌. ಸಂಜಾತ್ ಪ್ರತಿದಿನ ಆಸ್ಪತ್ರೆಯಲ್ಲಿ‌ ಕರ್ತವ್ಯ ವೈದ್ಯರು ಇರುತ್ತಾರೆ ಎಂದು ಸಮಜಾಯಿಷಿ ಕೊಟ್ಟರು. ಆರೋಗ್ಯಾಧಿಕಾರಿಯ ಸಮಜಾಯಿಷಿಗೆ ಆಕ್ಷೇಪಿಸಿದ ದೇವಿಪ್ರಸಾದ್ ವೈದ್ಯರು ಆಸ್ಪತ್ರೆಗೆ ಬಂದು ಥಂಬ್ ಹಾಕಿ ಖಾಸಗಿ ಸೇವೆಗೆ ಹೋಗುತ್ತಾರೆ,
ನಾನು ದಾಖಲೆ ಕೊಡುತ್ತೇನೆ , ಜನರಿಗೆ‌ ಬೇಕಾದಾಗ ವೈದ್ಯರು
ಜನರಿಗೆ ಸಿಗುವುದಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರುವುದಾಗಿ ಶಾಸಕರು ಭರವಸೆ ನೀಡಿದರು.
ಅಲ್ಲಾಟಬೈಲು ಪ್ರದೇಶದ 10-12 ಬಡ ಕುಟುಂಬಗಳಿಗೆ ರಸ್ತೆ ಇಲ್ಲ , ಒಂದು ಕಡೆ ಖಾಸಗಿ ವ್ಯಕ್ತಿಯೊಬ್ಬರ ತಮ್ಮ ಜಾಗವೆಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ನಮಗೆ ರಸ್ತೆ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ ನಮಗೆ ರಸ್ತೆ ಮಾಡಿ ಕೊಡಿ ಎಂದು ಸ್ಥಳೀಯರಾದ ಭರತ್ ರಾಜ್ ಎಂಬವರು ವಿನಂತಿಸಿಕೊಂಡರು.
ಈ ಬಗ್ಗೆ ಕೂಡಲೇ ಪಟ್ಟಣ ಪಂಚಾಯತ್ ಮತ್ತು ಕಂದಾಯ ಇಲಾಖೆ ಜಂಟಿಸರ್ವೆ ನಡೆಸಿ ವರದಿ ಮಾಡಿ ಮುಂದಿನ ಪ್ರಯತ್ನ ನಾನು ಮುಂದುವರಿಸುತ್ತೇನೆ ಎಂದು‌ ಶಾಸಕರು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು. ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಜಂಗಲ್ ಕಟ್ಟಿಂಗ್ ಮಾಡಿಲ್ಲ ಕೂಡಲೇ ಮಾಡಿಸಿ ಎಂದು ಪ ಪಂ ಮಾಜಿ ಅಧ್ಯಕ್ಷ ಜಯಾನಂದ ಗೌಡ ಮನವಿ ಮಾಡಿಕೊಂಡರು.


ಈ ಬಗ್ಗೆ ಮುಖ್ಯಾಧಿಕಾರಿಯವರು ಉತ್ತರಿಸುತ್ತಾ ಪೌರ ಕಾರ್ಮಿಕರಿಂದ ಜಂಗಲ್ ಕಟ್ಟಿಂಗ್ ಮಾಡಿಸುತ್ತಿದ್ದೇವೆ ಎಂದು ತಿಳಿಸಿದ್ದು ಈ ಬಗ್ಗೆ ಆಕ್ಷೇಪಿಸಿದ ಮುಖಂಡರಾದ ಬಿ.ಕೆ. ವಸಂತ್ ನೀವು ಪೌರ ಕಾರ್ಮಿಕ‌ರನ್ನು ಜಂಗಲ್ ಕಟ್ಟಿಂಗ್ ಕೆಲಸಕ್ಕೆ ಉಪಯೋಗಿಸುವುದು ಸರಿಯಲ್ಲ, ನಮಗೆ ಗೊತ್ತಿದೆ ಪೌರ ಕಾರ್ಮಿಕರನ್ನು ಕೆಲವು ಅಧಿಕಾರಿಗಳು ಮನೆಯ ಕೆಲಸವನ್ನೂ ಮಾಡಿಸುತ್ತಾರೆ ಪೌರ ಕಾರ್ಮಿಕರು ಸ್ವಚ್ಛತೆ ಕೆಲಸವನ್ನು ಮಾತ್ರ ಮಾಡಲಿ ಎಂದು ಒತ್ತಾಯಿಸಿದರು.
ಈ ಸಂದರ್ಭ ಜಯಾನಂದ ಗೌಡ ಮಾತನಾಡಿ ಪೌರ ಕಾರ್ಮಿಕರಿಂದ ಜಂಗಲ್ ಕಟ್ಟಿಂಗ್ ಮಾಡಿಸಿದ್ರೆ 12 ಗಂಟೆವರೆಗೆ ಮಾಡಿ‌ ಹೋಗುತ್ತಾರೆ ಹಾಗೆ ಮಾಡಿದ್ರೆ ವರ್ಷಗಟ್ಟಲೆ ಮುಗಿಯಲಿಕ್ಕಿಲ್ಲ , ನೀವು ಜಂಗಲ್ ಕಟ್ಟಿಂಗ್ ಕೆಲಸವನ್ನು‌ ಗುತ್ತಿಗೆದಾರರಿಂದ ಮಾಡಿಸಿ ಎಂದು ಒತ್ತಾಯಿಸಿದರು. ಈ ಬಗ್ಗೆ ಮಾತನಾಡಿದ ಶಾಸಕ ಹರೀಶ್ ಪೂಂಜ ಜಂಗಲ್ ಕಟ್ಟಿಂಗ್ ಕಾರ್ಯವನ್ನು ಗುತ್ತಿಗೆದಾರರಿಂದಲೇ ಮಾಡಿಸಿ ಎಂದು ಮುಖ್ಯಾಧಿಕಾರಿಯವರಿಗೆ ಸೂಚಿಸಿದರು.
ಪ.ಪಂ. ಆಡಳಿತಾಧಿಕಾರಿ ಪೃಥ್ವಿ ಸಾನಿಕಂ, ತಾ.ಪಂ. ಇಒ ಭವಾನಿ ಶಂಕರ್, ಮುಖ್ಯಾಧಿಕಾರಿ ರಾಜೇಶ್ ಕೆ., ಗುರುವಾಯನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುಗಳಿ ನಾರಾಯಣ ರಾವ್, ಇಲಾಖಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!