ನೈಂಟಿ ಮೀಟಿದ ಮದ್ಯಾಭಿಮಾನಿಗೆ ಚರಂಡಿಯೇ ಸಿಂಹಾಸನ!

ನೈಂಟಿ ಮೀಟಿದ ಮದ್ಯಾಭಿಮಾನಿಗೆ ಚರಂಡಿಯೇ ಸಿಂಹಾಸನ!

Share

ಹೇಳ್ಕೊಳ್ಳೊಕೊಂದೂರು ತಲೆಮ್ಯಾಗೆ ಒಂದ್ ಸೂರು
ಮಲ್ಗೋಕೆ ಭೂಮ್ತಾಯಿ ಮಂಚ…

ಬೆಳ್ತಂಗಡಿ : ಉಜಿರೆಯ ಸ್ಟಾರ್ ವೈನ್ಸ್ ವಠಾರದಲ್ಲಿ ಮದ್ಯ ವ್ಯಸನಿಯೊಬ್ಬ ನಿಯಂತ್ರಣ ತಪ್ಪಿ ಚರಂಡಿ ಪಾಲಾಗಿ ಮೈಮರೆತ ‘ಅಮೃತ’ ಘಳಿಗೆಯೊಂದು
ಶುಕ್ರವಾರ ಸಂಜೆ ನಾಗರಿಕರಿಗೂ ಹವ್ಯಾಸಿ ಕುಡುಕರಿಗೂ ಉಚಿತ ಮನರಂಜನೆಗೆ ಕಾರಣವಾಯಿತು.

ಉಜಿರೆ ಸ್ಟಾರ್ ವೈನ್ಸ್ ಸನ್ನಿಧಾನದಲ್ಲಿ ಶುಕ್ರವಾರ ಕತ್ತಲು ಕವಿಯುವ ಹೊತ್ತು ಈತನ ಸ್ಟಾರ್ ಬದಲಾಗಿದೆ!
ಸಂಜೆ ಹೊತ್ತು ಗೋಧೋಳಿ ಘಳಿಗೆಯಲ್ಲಿ ನೈಂಟಿ ಹೊಡ್ಕೊಂಡು ಮನೆ ಕಡೆ ಹೆಜ್ಜೆ ಹಾಕುವ ಹೊತ್ತಿನಲ್ಲಿ ಈತ ಮದ್ಯವಶವಾಗಿದ್ದು
ಕುಡುಕರೂ ಕುಡುಕೇತರರೂ ಇತ್ತ ಇಣುಕಿ ನೋಡುವಂತೆ ಮಾಡಿತು.
ಈ ದೃಶ್ಯಕ್ಕೆ ಒಪ್ಪುವಂಥ ಕನ್ನಡದ ಪ್ರಸಿದ್ಧ ರತ್ನನ್ ಪದಗಳ ಸಾಲೊಂದು ಕೆಲವರಿಗಾದರೂ ನೆನಪಾಗದಿರದು.!

“ಹೇಳ್ಕೊಳ್ಳೊಕೊಂದೂರು ತಲೆಮ್ಯಾಗೆ ಒಂದ್ಸೂರು…
ಮಲ್ಗೋಕೆ ಭೂಮ್ತಾಯಿ ಮಂಚ…

ಕೈಹಿಡಿದೋಳ್ ಪುಟ್ನಂಜಿ
ನಗ್ ನಗ್ ತ ಉಪ್ಗಂಜಿ ಕೊಟ್ರಾಯ್ತು ಕುಡ್ಕನ್ ಪರ್ ಪಂಚಾ….

Post Comment

ಟ್ರೆಂಡಿಂಗ್‌

error: Content is protected !!